ಹೊಸದಿಗಂತ ವರದಿ, ರಾಮನಗರ:
ರೇಷ್ಮೆನಗರಿ ರಾಮನಗರ ಜಿಲ್ಲೆಯಲ್ಲಿ ಈ ವರ್ಷ ರಾಗಿ ಫಸಲು ಅತ್ಯುತ್ತಮವಾಗಿ ಬಂದಿತ್ತು. ಆದರೆ ಡಿಸೆಂಬರ್ ತಿಂಗಳಿನಲ್ಲಿ ಹಲಾವರು ರೈತರು ರಾಗಿ ಬೆಳೆಯನ್ನು ಕಟಾವ್ ಕೂಡ ಮಾಡಿದ್ದರು ಆದರೇ ಅಕಾಲಿಕವಾಗಿ ಬಂದ ನಿವಾರ್ ಚಂಡಮಾರುತದಿoದಾಗಿ ಜಿಲ್ಲೆಯ ಹಲವೆಡೆ ರಾಗಿ ಫಸಲಿಗೆ ಪೆಟ್ಟಾಗಿದೆ.
ಇನ್ನೇನು ಕೆಲವು ಕಡೆ ಕಟಾವ್ ಮಾಡಬೇಕೆಂದು ಅನ್ನದಾತರು ತಯಾರಿ ಕೂಡ ನಡೆಸಿದ್ದರು. ಆದರೆ ಅಷ್ಟರಲ್ಲಿ ಸೂರ್ಯನ ಕಿರಣಗಳು ಮರೆಯಾಗಿ ನಿರಂತರವಾಗಿ ಜಿಟಿ ಜಿಟಿ ಮಳೆ ಸುರಿದ ಪರಿಣಾಮ ರಾಗಿಬೆಳೆಯಲ್ಲಿ ಮೊಳಕೆ ಕಾಣಿಸಿಕೊಂಡಿದೆ. ಇದರಿಂದಾಗಿ ರೈತರು ಕಂಗಾಲಾಗಿದ್ದಾರೆ. ರೇಷ್ಮೆ ನಗರಿ ರಾಮನಗರ ಜಿಲ್ಲೆಯಲ್ಲಿ ಈ ಬಾರಿ 68.046 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ ಮಾಡಲಾಗಿತ್ತು. ಜೊತೆಗೆ ಈ ಬಾರಿ ಜಿಲ್ಲೆಯಲ್ಲಿ ಉತ್ತಮವಾಗಿ ಬೆಳೆಯೂ ರೈತರ ಕೈಗೆ ಬಂದಿತ್ತು. ಆದರೆ ಬಾಯಿಗೆ ಬರುವಷ್ಟರಲ್ಲಿ ಮಳೆಯಿಂದಾಗಿ ಜಿಲ್ಲೆಯ ಹಲವೆಡೆ ರಾಗಿಫಸಲಿಗೆ ಪೆಟ್ಟಾಗಿರುವುದು ಕಂಡುಬoದಿದೆ.
ಜಿಲ್ಲೆಯ ರಾಮನಗರ, ಚನ್ನಪಟ್ಟಣ, ಕನಕಪುರ ಮಾಗಡಿ ತಾಲೂಕಿನ ಹಲವು ಕಡೆಗಳಲ್ಲಿ ರಾಗಿಬೆಳೆಗೆ ಮಳೆ ಅವಾಂತರ ತಂದಿದೆ. ಈ ಬಗ್ಗೆ ರೈತ ಮುಖಂಡ ಶಿವಕುಮಾರ್ ತುಂಬೇನಹಳ್ಳಿ ಮಾತನಾಡಿ, ಈ ಬಾರಿ ಜಿಲ್ಲೆಯಲ್ಲಿ ಉತ್ತಮವಾಗಿ ರಾಗಿಫಸಲು ಬಂದಿತ್ತು. ಆದರೆ ಕಳೆದ ವಾರ ನಿರಂತರವಾಗಿ ಮಳೆ ಸುರಿದ ಕಾರಣ ಕಟಾವ್ ಮಾಡುವುದಕ್ಕೂ ಮೊದಲೇ ರಾಗಿ ತೆನೆಯಲ್ಲಿ ಮೊಳಕೆ ಬಂದಿದೆ. ಹಾಗಾಗಿ ಕೂಡಲೇ ಸಂಬoಧಪಟ್ಟ ಇಲಾಖೆಯ ಅಧಿಕಾರಿಗಳು ಬೆಳೆ ನಾಶವಾಗಿರುವ ಬಗ್ಗೆ ವರದಿ ಪಡೆದು ಸರ್ಕಾರದಿಂದ ಸೂಕ್ತ ಪರಿಹಾರದ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಈ ಬಗ್ಗೆ ಕೃಷಿ ಇಲಾಖೆಯ ರಾಮನಗರ ಜಿಲ್ಲಾ ಜಂಟಿ ನಿರ್ದೇಶಕ ಸೋಮಸುಂದರ್ ಮಾತನಾಡಿ, ಜ. 1 2020 ರಿಂದ ಡಿ.10 ರವರೆಗೆ ನಮ್ಮ ಜಿಲ್ಲೆಯಲ್ಲಿ ವಾಡಿಕೆಗಿಂತಲೂ ಹೆಚ್ಚಾಗಿ 15 % ಹೆಚ್ಚುವರಿ ಮಳೆಯಾಗಿದೆ. 833 ಮಿ.ಮೀ ಮಳೆಯಾಗಬೇಕಿತ್ತು, ಆದರೆ ನಮಗೆ 957 ಮಿ.ಮೀ ಮಳೆಯಾಗಿದೆ. ರಾಮನಗರದಲ್ಲಿ 19%, ಚನ್ನಪಟ್ಟಣ 14%, ಕನಕಪುರ 22%, ಹೆಚ್ಚುವರಿ ಮಳೆಯಾಗಿದ್ದು, ಮಾಗಡಿಯಲ್ಲಿ ಮಾತ್ರ 2% ಮಳೆ ಕೊರತೆಯಾಗಿದೆ. ವಾಡಿಕೆಗಿಂತಲೂ ಹೆಚ್ಚಾಗಿ ಮಳೆ ಸುರಿದಿರುವ ಕಾರಣ ಈ ಸಮಸ್ಯೆ ಆಗಿದೆ.