ಕಲಬುರಗಿ: ನೆರೆಯ ಮಹಾರಾಷ್ಟ್ರದಲ್ಲಿ ನಿರಂತರ ಮಳೆ ಹಿನ್ನಲೆಯಲ್ಲಿ ಜಿಲ್ಲೆಯ ಅಫಜಲಪುರ ತಾಲೂಕಿನ ಸೊನ್ನ ಬ್ಯಾರೇಜ್ ಸಂಪೂರ್ಣ ಭತಿ೯ಯಾಗಿದ್ದು, 65 ಸಾವಿರ ಕ್ಯುಸೆಕ್ ನೀರನ್ನು ಭೀಮಾ ನದಿಗೆ ಬಿಡಲಾಗಿದೆ. ಮಹಾರಾಷ್ಟ್ರದ ಉಜಿನಿ ಮತ್ತು ವೀರ್ ಡ್ಯಾಂನಿಂದ ಅಪಾರವಾದ ಪ್ರಮಾಣದಲ್ಲಿ ನೀರು ಹರಿದುಬರುತ್ತಿವೆ.
ಹೀಗಾಗಿ ಅಫಜಲಪುರ, ಜೇವರ್ಗಿ ತಾಲೂಕಗಳ ಭೀಮಾ ನದಿ ತೀರದ ಜನರಿಗೆ ಅಧಿಕಾರಿಗಳು ಎಚ್ಚರಿಕೆ ಇಂದಿರಲು ತಿಳಿಸಿದ್ದಲ್ಲದೆ ನದಿ ತೀರದಲ್ಲಿ ಜನ ಜಾನುವಾರುಗಳು ತೆರಳದಂತೆ ಅಧಿಕಾರಿಗಳ ಸೂಚನೆ ನೀಡಿದ್ದಾರೆ. ಇನ್ನೂ ನಾಲ್ಕೈದು ದಿನಗಳ ಕಾಲ ಮಳೆ ಮುಂದುವರಿಯುವ ಸೂಚನೆಯನ್ನು ಹವಮಾನ ಇಲಾಖೆ ತಿಳಿಸಿದೆ.