Friday, September 25, 2020
Friday, September 25, 2020

Latest Posts

ಇಹಲೋಕಕ್ಕೆ ವಿದಾಯ ಹೇಳಿದ ಗಾನ ಗಂಧರ್ವ: ಸ್ವರ ಸಾಮ್ರಾಟ ಎಸ್ ಪಿಬಿ ಇನ್ನು ನೆನಪು ಮಾತ್ರ

ಚೆನ್ನೈ: ಗಾನಲೋಕದ ಗಂಧರ್ವ, ಸಂಗೀತಪ್ರಿಯರ ಹೃದಯ ಸಾಮ್ರಾಟ, ಬಹುಭಾಷಾ ಗಾಯಕ, ಪದ್ಮಶ್ರೀ, ಪದ್ಮಭೂಷಣ ಎಸ್.ಪಿ ಬಾಲಸುಬ್ರಹ್ಮಣ್ಯಂ ಶುಕ್ರವಾರ ಮಧ್ಯಾಹ್ನ ವಿಧಿವಶರಾಗಿದ್ದಾರೆ. ವಿವಿಧ ಭಾಷೆಗಳಲ್ಲಿ 40 ಸಾವಿರಕ್ಕೂ ಅಧಿಕ ಹಾಡುಗಳಿಗೆ ಧ್ವನಿ ನೀಡಿ, ಭಾರತೀಯ ಚಿತ್ರರಂಗದ...

ವಿಜಯಪುರ: ಗೊಳಸಂಗಿ ಗ್ರಾಮದ ಸಜ್ಜೆ ಹೊಲದಲ್ಲಿ ವ್ಯಕ್ತಿಯೊಬ್ಬನ ಕೊಲೆ

ವಿಜಯಪುರ: ಹೊಲಕ್ಕೆ ಹೋಗಿದ್ದ ವ್ಯಕ್ತಿಯೊಬ್ಬ ಕೊಲೆಯಾದ ಘಟನೆ ಜಿಲ್ಲೆಯ ನಿಡಗುಂದಿ ತಾಲೂಕಿನ ಗೊಳಸಂಗಿಯಲ್ಲಿ ನಡೆದಿದೆ. ಮೃತಪಟ್ಟವನನ್ನು ಗೊಳಸಂಗಿ ಗ್ರಾಮದ ರಾಜೇಸಾಬ ಗೂಡುಸಾಬ ಹತ್ತರಕಿಹಾಳ (54) ಎಂದು ಗುರುತಿಸಲಾಗಿದೆ. ರಾಜೇಸಾಬ ಹತ್ತರಕಿಹಾಳ ತೆಲಗಿ ರಸ್ತೆಯ ತಮ್ಮ...

ಅವಿಶ್ವಾಸ ನಿರ್ಣಯದ ಬಗ್ಗೆ ನನ್ನ ಜತೆ ಚರ್ಚೆ ಆಗಿಲ್ಲ: ಮಾಜಿ ಸಿಎಂ ಕುಮಾರಸ್ವಾಮಿ

ಬೆಂಗಳೂರು: ಕಾಂಗ್ರೆಸ್ ತಂದಿರುವ ಅವಿಶ್ವಾಸ ನಿರ್ಣಯದ ಬಗ್ಗೆ ನಮ್ಮ ಜೊತೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಈ ಸಮಯ ಕಷ್ಟದ್ದಾಗಿದೆ, ಕೊರೋನಾ ನೆರೆಯಿಂದ ಎಲ್ಲರೂ ನಲುಗಿದ್ದೇವೆ. ಈ...

ಸೋಂಕಿತರ ಪತ್ತೆಗಾಗಿ 8500ಕಿಟ್ ಬಂದಿದೆ: ಬಿಜೆಪಿ ಶಾಸಕ ಎಲ್.ನಾಗೇಂದ್ರ

sharing is caring...!

ಮೈಸೂರು: ಮೈಸೂರಿನಲ್ಲಿ ಕೊರೋನಾ ಸೋಂಕಿತರ ಪತ್ತೆಗಾಗಿ 8500 ರ‍್ಯಾಪಿಡ್ ಕಿಟ್ ಬಂದಿದ್ದು, ಕೋವಿಡ್ ಲಕ್ಷಣವುಳ್ಳವರು ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ಸೋಂಕು ಹರಡುವಿಕೆಗೆ ಕಡಿವಾಣ ಹಾಕಲು ಸಹಕರಿಸಬೇಕೆಂದು ಮೈಸೂರಿನ ಚಾಮರಾಜ ಕ್ಷೇತ್ರದ ಬಿಜೆಪಿ ಶಾಸಕ ಎಲ್.ನಾಗೇಂದ್ರ ತಿಳಿಸಿದರು.
ಶುಕ್ರವಾರ ಮೈಸೂರು ನಗರಪಾಲಿಕೆಯ ವಾರ್ಡ್ ನಂ-೧೯ ರ ವ್ಯಾಪ್ತಿಯಲ್ಲಿಲ್ಲಿ ಬರುವ ಪ್ರೀಮಿಯರ್ ಸ್ಟುಡಿಯೋ ಹತ್ತಿರದ ಹುಣಸೂರು ರಸ್ತೆಯಿಂದ ಕಾಳಿದಾಸ ರಸ್ತೆಯವರೆಗೆ ರಸ್ತೆ ಅಭಿವೃದ್ದಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಕೈಲಾಸಪುರಂ ಈ ಭಾಗದಲ್ಲಿ ೨೮೦ಮಂದಿಗೆ ಟೆಸ್ಟ್ ಮಾಡಿಸಿದಾಗ ಸುಮಾರು ೫೮-೬೦ಮಂದಿಗೆ ಕೊರೋನಾ ಬಂದಿದೆ. ಅದೇ ರೀತಿ ವಿಜಯ ನಗರ, ಹೆಬ್ಬಾಳು ಇಲ್ಲಿಯೂ ಹೆಚ್ಚು ವಿಕ್ರಾಂತ್ (ಜೆಕೆ ಟೈರ್) ಕಾರ್ಖಾನೆಯಲ್ಲಿರೋದರಿಂದ ಹೆಬ್ಬಾಳು, ಲೋಕನಾಯಕ ನಗರ, ಮೇಟಗಳ್ಳಿ ಈ ಭಾಗದ ಜನರಿಗೂ ಮೂರು ದಿನ ಸತತವಾಗಿ ರ‍್ಯಾಂಡಮ್ ಟೆಸ್ಟ್ ಮಾಡಲಾಗುತ್ತಿದ್ದು, ಸಾರ್ವಜನಿಕರು ಅದರ ಉಪಯೋಗವನ್ನು ಪಡೆಯಬೇಕು ಎಂದು ಹೇಳಿದರು.
ಯಾರಲ್ಲಿ ಸೋಂಕಿನ ಲಕ್ಷಣಗಳಿವೆಯೋ ಅವರು ಟೆಸ್ಟ್ ಮಾಡಿಸಿಕೊಳ್ಳಿ, ಯಾವುದೇ ಲಕ್ಷಣಗಳಿರದವರು ಅನವಶ್ಯಕವಾಗಿ ಟೆಸ್ಟ್ ಮಾಡಿಸಿಕೊಳ್ಳುವುದು ಬೇಡ. ಕೆಮ್ಮು, ನೆಗಡಿ, ಶೀತಬಾಧೆಯಿಂದ, ಉಸಿರಾಟದ ಸಮಸ್ಯೆಯಿಂದ ಒದ್ದಾಡುತ್ತಿರುವವರ ಸಹ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುವುದು ಒಳ್ಳೆಯದು. ನಮ್ಮಿಂದ ಬೇರೆ ಬೇರೆಯವರಿಗೆ ಹರಡದಂತೆ ತಡೆಯುವುದಕ್ಕೋಸ್ಕರ ಟೆಸ್ಟ್ ಮಾಡಿಸಿಕೊಳ್ಳಿ, ಯಾರೂ ಹೆದರುವ ಅವಶ್ಯಕತೆಯಿಲ್ಲ. ಸೋಂಕಿತರ ಚಿಕಿತ್ಸೆಗಂದು ಸರ್ಕಾರ ಖರ್ಚು ಮಾಡುತ್ತಿದೆ ಎಂದರು.
ಪ್ರೀಮಿಯರ್ ಸ್ಟುಡಿಯೋ ಪಕ್ಕದಲ್ಲಿ ಬಹಳ ಪ್ರಮುಖವಾಗಿ ಜನ ಓಡಾಡುವಂತಹ ರಸ್ತೆ. ಇದು ತುಂಬಾ ಹಾಳಾಗಿತ್ತು. ೩೪ಲಕ್ಷರೂ. ವೆಚ್ಚದಲ್ಲಿ ಈ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದೇವೆ. ಬಹಳ ವರ್ಷಗಳಿಂದ ಬಹಳ ಸಮಸ್ಯೆಯಾಗಿತ್ತು. ಮಳೆ ಬಂದರೆ ಓಡಾಡಲು ಸಾಧ್ಯವಾಗುತ್ತಿರಲಿಲ್ಲ. ನಾನು ಕೂಡ ಓಡಾಡೋ ರಸ್ತೆ. ನನಗೂ ಕೂಡ ಓಡಾಡಲು ಕಷ್ಟವಾಗ್ತಿತ್ತು. ಹಾಗಾಗಿ ನನಗೂ ಕೂಡ ಸಮಸ್ಯೆಯಾಗುತ್ತಿತ್ತು. ಇದನ್ನು ನಿವಾರಿಸುವ ನಿಟ್ಟಿನಲ್ಲಿ ಈಗ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನಗರಪಾಲಿಕೆ ಸದಸ್ಯೆ ಭಾಗ್ಯ ಮಾದೇಶ್, ಚಾಮರಾಜ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸೋಮಶೇಖರರಾಜು, ಉಪಾಧ್ಯಕ್ಷ ಕುಮಾರ್ ಗೌಡ, ಪ್ರಧಾನ ಕಾರ್ಯದರ್ಶಿ ರಮೇಶ್, ಚಿಕ್ಕವೆಂಕಟ್, ಚಂದ್ರಕಲಾ, ಮಹೇಶ್, ಹರೀಶ್ ಮಹಾನಗರಪಾಲಿಕೆ ವಲಯ ಕಚೇರಿ-೪ ರ ಸಹಾಯಕ ಆಯುಕ್ತೆ ಪ್ರಿಯದರ್ಶಿನಿ, ಅಭಿವೃದ್ದಿ ಅಧಿಕಾರಿ ಹೇಗಾನಂದ್, ಪಾಲಿಕೆ ಇಂಜಿನಿಯರ್ ಗುರುಸಿದ್ದಯ್ಯ, ಗುತ್ತಿಗೆದಾರರಾದ ಎಸ್.ಎಂ. ಇಂದ್ರೇಶ್ ಮತ್ತಿತರರು ಹಾಜರಿದ್ದರು.

Latest Posts

ಇಹಲೋಕಕ್ಕೆ ವಿದಾಯ ಹೇಳಿದ ಗಾನ ಗಂಧರ್ವ: ಸ್ವರ ಸಾಮ್ರಾಟ ಎಸ್ ಪಿಬಿ ಇನ್ನು ನೆನಪು ಮಾತ್ರ

ಚೆನ್ನೈ: ಗಾನಲೋಕದ ಗಂಧರ್ವ, ಸಂಗೀತಪ್ರಿಯರ ಹೃದಯ ಸಾಮ್ರಾಟ, ಬಹುಭಾಷಾ ಗಾಯಕ, ಪದ್ಮಶ್ರೀ, ಪದ್ಮಭೂಷಣ ಎಸ್.ಪಿ ಬಾಲಸುಬ್ರಹ್ಮಣ್ಯಂ ಶುಕ್ರವಾರ ಮಧ್ಯಾಹ್ನ ವಿಧಿವಶರಾಗಿದ್ದಾರೆ. ವಿವಿಧ ಭಾಷೆಗಳಲ್ಲಿ 40 ಸಾವಿರಕ್ಕೂ ಅಧಿಕ ಹಾಡುಗಳಿಗೆ ಧ್ವನಿ ನೀಡಿ, ಭಾರತೀಯ ಚಿತ್ರರಂಗದ...

ವಿಜಯಪುರ: ಗೊಳಸಂಗಿ ಗ್ರಾಮದ ಸಜ್ಜೆ ಹೊಲದಲ್ಲಿ ವ್ಯಕ್ತಿಯೊಬ್ಬನ ಕೊಲೆ

ವಿಜಯಪುರ: ಹೊಲಕ್ಕೆ ಹೋಗಿದ್ದ ವ್ಯಕ್ತಿಯೊಬ್ಬ ಕೊಲೆಯಾದ ಘಟನೆ ಜಿಲ್ಲೆಯ ನಿಡಗುಂದಿ ತಾಲೂಕಿನ ಗೊಳಸಂಗಿಯಲ್ಲಿ ನಡೆದಿದೆ. ಮೃತಪಟ್ಟವನನ್ನು ಗೊಳಸಂಗಿ ಗ್ರಾಮದ ರಾಜೇಸಾಬ ಗೂಡುಸಾಬ ಹತ್ತರಕಿಹಾಳ (54) ಎಂದು ಗುರುತಿಸಲಾಗಿದೆ. ರಾಜೇಸಾಬ ಹತ್ತರಕಿಹಾಳ ತೆಲಗಿ ರಸ್ತೆಯ ತಮ್ಮ...

ಅವಿಶ್ವಾಸ ನಿರ್ಣಯದ ಬಗ್ಗೆ ನನ್ನ ಜತೆ ಚರ್ಚೆ ಆಗಿಲ್ಲ: ಮಾಜಿ ಸಿಎಂ ಕುಮಾರಸ್ವಾಮಿ

ಬೆಂಗಳೂರು: ಕಾಂಗ್ರೆಸ್ ತಂದಿರುವ ಅವಿಶ್ವಾಸ ನಿರ್ಣಯದ ಬಗ್ಗೆ ನಮ್ಮ ಜೊತೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಈ ಸಮಯ ಕಷ್ಟದ್ದಾಗಿದೆ, ಕೊರೋನಾ ನೆರೆಯಿಂದ ಎಲ್ಲರೂ ನಲುಗಿದ್ದೇವೆ. ಈ...

ಭಾರತ -ಚೀನಾ ಗಡಿ ವಿವಾದ ಬಗೆಹರಿಸಲು ಸಿದ್ಧ: ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಭಾರತ ಮತ್ತು ಚೀನಾ ಗಡಿ ವಿವಾದವನ್ನು ಬಗೆಹರಿಸಲು ಅಮೆರಿಕಾ ಸಹಾಯ ಮಾಡುತ್ತದೆ ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ. ಶ್ವೇತ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡೊನಾಲ್ಡ್ ಟ್ರಂಪ್ ಚೀನಾ ಮತ್ತು ಭಾರತ...

Don't Miss

ಇಹಲೋಕಕ್ಕೆ ವಿದಾಯ ಹೇಳಿದ ಗಾನ ಗಂಧರ್ವ: ಸ್ವರ ಸಾಮ್ರಾಟ ಎಸ್ ಪಿಬಿ ಇನ್ನು ನೆನಪು ಮಾತ್ರ

ಚೆನ್ನೈ: ಗಾನಲೋಕದ ಗಂಧರ್ವ, ಸಂಗೀತಪ್ರಿಯರ ಹೃದಯ ಸಾಮ್ರಾಟ, ಬಹುಭಾಷಾ ಗಾಯಕ, ಪದ್ಮಶ್ರೀ, ಪದ್ಮಭೂಷಣ ಎಸ್.ಪಿ ಬಾಲಸುಬ್ರಹ್ಮಣ್ಯಂ ಶುಕ್ರವಾರ ಮಧ್ಯಾಹ್ನ ವಿಧಿವಶರಾಗಿದ್ದಾರೆ. ವಿವಿಧ ಭಾಷೆಗಳಲ್ಲಿ 40 ಸಾವಿರಕ್ಕೂ ಅಧಿಕ ಹಾಡುಗಳಿಗೆ ಧ್ವನಿ ನೀಡಿ, ಭಾರತೀಯ ಚಿತ್ರರಂಗದ...

ವಿಜಯಪುರ: ಗೊಳಸಂಗಿ ಗ್ರಾಮದ ಸಜ್ಜೆ ಹೊಲದಲ್ಲಿ ವ್ಯಕ್ತಿಯೊಬ್ಬನ ಕೊಲೆ

ವಿಜಯಪುರ: ಹೊಲಕ್ಕೆ ಹೋಗಿದ್ದ ವ್ಯಕ್ತಿಯೊಬ್ಬ ಕೊಲೆಯಾದ ಘಟನೆ ಜಿಲ್ಲೆಯ ನಿಡಗುಂದಿ ತಾಲೂಕಿನ ಗೊಳಸಂಗಿಯಲ್ಲಿ ನಡೆದಿದೆ. ಮೃತಪಟ್ಟವನನ್ನು ಗೊಳಸಂಗಿ ಗ್ರಾಮದ ರಾಜೇಸಾಬ ಗೂಡುಸಾಬ ಹತ್ತರಕಿಹಾಳ (54) ಎಂದು ಗುರುತಿಸಲಾಗಿದೆ. ರಾಜೇಸಾಬ ಹತ್ತರಕಿಹಾಳ ತೆಲಗಿ ರಸ್ತೆಯ ತಮ್ಮ...

ಅವಿಶ್ವಾಸ ನಿರ್ಣಯದ ಬಗ್ಗೆ ನನ್ನ ಜತೆ ಚರ್ಚೆ ಆಗಿಲ್ಲ: ಮಾಜಿ ಸಿಎಂ ಕುಮಾರಸ್ವಾಮಿ

ಬೆಂಗಳೂರು: ಕಾಂಗ್ರೆಸ್ ತಂದಿರುವ ಅವಿಶ್ವಾಸ ನಿರ್ಣಯದ ಬಗ್ಗೆ ನಮ್ಮ ಜೊತೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಈ ಸಮಯ ಕಷ್ಟದ್ದಾಗಿದೆ, ಕೊರೋನಾ ನೆರೆಯಿಂದ ಎಲ್ಲರೂ ನಲುಗಿದ್ದೇವೆ. ಈ...
error: Content is protected !!