Sunday, August 14, 2022

Latest Posts

ಸೋಂಕಿತ ಸರ್ಕಾರವಲ್ಲ, ಸೋಂಕಿತ ಮನಸ್ಥಿತಿ: ಸಚಿವ ಡಾ.ಕೆ. ಸುಧಾಕರ್

ಬೆಂಗಳೂರು: ಕೊರೋನಾ ನಿಯಂತ್ರಣಕ್ಕೆ ಇಡೀ ಸರ್ಕಾರ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕೆಲವು ಶಾಸಕರು ಸೋಂಕಿತ ಸರ್ಕಾರ ಎಂದು ಬರೆದಿರುವ ಮಾಸ್ಕ್ ಹಾಕಿದ್ದು, ಇದು ಸೋಂಕಿತ ಮನಸ್ಥಿತಿ ಪ್ರದರ್ಶನ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು ಸಹಸ್ರಾರು ಕೊರೋನಾ ಯೋಧರುತಮ್ಮ ಜೀವ ಪಣಕ್ಕಿಟ್ಟು ಅವಿರತ ಶ್ರಮದಿಂದ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೆಲವು ಶಾಸಕರು ಸೋಂಕಿತ ಸರ್ಕಾರ ಎಂದು ಕರೆಯುವ ಮೂಲಕ ತಮ್ಮ ಸೋಂಕಿನ ಮನಸ್ಥಿತಿ ಪ್ರದರ್ಶಿಸಿರುವುದು ದುರದೃಷ್ಟಕರ ಎಂದಿದ್ದಾರೆ.
ಚಪ್ಪಾಳೆ ತಟ್ಟುವುದರಿಂದ, ದೀಪ ಹಚ್ಚುವುದರಿಂದ ಕೊರೋನಾ ಹೋಗುತ್ತದೆ ಎಂದು ಯಾರೂ ಹೇಳಿಲ್ಲ. ಅದೊಂದು ಸಾಮೂಹಿಕ ಪ್ರಜ್ಞೆ ಬೆಳೆಸುವ,ಅರಿವು ಮೂಡಿಸುವ ಮನೋವೈಜ್ಞಾನಿಕ ಪ್ರಕ್ರಿಯೆ ಆಗಿತ್ತು ಎಂದಿದ್ದಾರೆ. ಏಡ್ಸ್,ಪೊಲಿಯೋದಂತಹ ರೋಗಗಳ ಬಗ್ಗೆ ಅರಿವು ಮೂಡಿಸಲು ವರ್ಷವೇ ಬೇಕಾಯ್ತು. ಆದರೆ ಲಾಕ್‌ಡೌನ್ ಮೂಲಕ ಕೆಲವೇ ದಿನಗಳನ್ನು ಅರಿವು ಮೂಡಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss