Sunday, August 14, 2022

Latest Posts

ಸೋಂಕು ತಪ್ಪು ಮಾಹಿತಿ ತಡೆಯಲು ಭಾರತ ಸೇರಿ 12 ರಾಷ್ಟ್ರ ಹೋರಾಟ

ಹೊಸದಿಲ್ಲಿ: ಕೊರೋನಾ ಕುರಿತು ಜನರಿಗೆ ಸಮರ್ಪಕವಾದ ಮಾಹಿತಿ, ಜಾಗೃತಿ ಮೂಡಿಸುವ ಹಾಗೂ ಸೋಂಕಿನ ಬಗ್ಗೆ ಜನರಿಗೆ ತಪ್ಪು ಮಾಹಿತಿ ತಡೆಯಲು ಭಾರತ ಸೇರಿ 12 ರಾಷ್ಟ್ರಗಳು ನೇತೃತ್ವ ವಹಿಸಿ ಹೋರಾಟಕ್ಕೆ ಮುಂದಾಗಿವೆ.
ಭಾರತ ಸೇರಿ ಆಸ್ಪ್ರೇಲಿಯಾ, ಫ್ರಾನ್ಸ್‌, ಚಿಲಿ, ಇಂಡೋನೇಷ್ಯಾ, ಮೆಕ್ಸಿಕೋ, ನಾರ್ವೇ, ಸೆನಗಲ್‌ ಸೇರಿ 12 ರಾಷ್ಟ್ರಗಳು ಮುಂದಾಳತ್ವ ವಹಿಸಿದ್ದು, ಒಟ್ಟು 130 ರಾಷ್ಟ್ರಗಳು ಹೋರಾಟಕ್ಕೆ ಬೆಂಬಲ ಸೂಚಿಸಿವೆ.
ಕೊರೋನಾ ವಿರುದ್ಧ ಹೋರಾಡಲು , ಲಸಿಕೆ ಕಂಡುಹಿಡಿಯಲು ಹಲವು ರಾಷ್ಟ್ರಗಳು ಒಗ್ಗೂಡಿವೆ. ಅದರಲ್ಲೂ, ಕೊರೋನಾ ಕುರಿತು ಹರಡಿಸುತ್ತಿರುವ ಸುಳ್ಳು ಮಾಹಿತಿ, ದ್ವೇಷದ ಹೇಳಿಕೆಗಳು ಅಪಾಯಕಾರಾಗಿದ್ದು, ಇವುಗಳ ವಿರುದ್ಧ ಸಮರ ಸಾರಲಾಗುತ್ತಿದೆ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೋ ಗುಟೆರ್ರಸ್‌ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss