Tuesday, June 28, 2022

Latest Posts

ಸೋಗಾನೆ ಕೇಂದ್ರ ಕಾರಾಗೃಹದಲ್ಲಿ ಕ್ಷುಲ್ಲಕ ಕಾರಣಕ್ಕೆ ಖೈದಿಗಳ ನಡುವೆ ಹಲ್ಲೆ

ಹೊಸದಿಗಂತ ವರದಿ, ಶಿವಮೊಗ್ಗ:

ನಗರದ ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಸಜಾಬಂಧಿಯೋರ್ವ ಕ್ಷುಲ್ಲಕ ಕಾರಣಕ್ಕೆ ಇತರೆ ಬಂಧಿಗಳ ಮೇಲೆ ಹಲ್ಲೆ ನಡೆಸಿರುವ ಘಟನೆ ಭಾನುವಾರ ನಡೆದಿದೆ.
ಹಲ್ಲೆಯಿಂದ ಮೂವರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಜೈಲು ಮೂಲಗಳು ಖಚಿತಪಡಿಸಿವೆ.
ಉಡುಪಿ ಮೂಲದ ಪ್ರಶಾಂತ್ ಎಂಬ ಖೈದಿ ಭಾನುವಾರ ಕುಡಿಯುವ ನೀರಿನ ವಿಚಾರದಲ್ಲಿ ತಗಾದೆ ತೆಗೆದಿದ್ದಾನೆ. ಆಗ ಸಹ ಖೈದಿಗಳಾದ ಚಿಕ್ಕಮಗಳೂರಿನ ಬೆನಕಶೆಟ್ಟಿ, ಶಿವಮೊಗ್ಗದ ದೇವೇಂದ್ರಪ್ಪ ಹಾಗೂ ಮಲ್ಲೇಶಪ್ಪ ಜಗಳ ಮಾಡದಂತೆ ತಿಳುವಳಿಕೆ ಹೇಳಿದ್ದಾರೆ. ಇದರಿಂದ ಕುಪಿತಗೊಂಡ ಪ್ರಶಾಂತ್ ಊಟ ಮಾಡಲು ನೀಡಿದ್ದ ಚಮಚವನ್ನೇ ಆಯುಧವಾಗಿ ಮಾಡಿಕೊಂಡು ಚುಚ್ಚಿದ್ದಾನೆ. ಇದರಿಂದ ಸಹ ಖೈದಿಗಳು ಗಾಯಗೊಂಡಿದ್ದಾರೆ.
ಪ್ರಶಾಂತ್ ನ್ಯಾಯಾಧೀಶರನ್ನು ನಿಂದಿಸಿ ಜೈಲು ಪಾಲಾಗಿದ್ದಾನೆ. ಇಲ್ಲಿಗೆ ಬಂದ ನಂತರ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾನೆ ಎನ್ನಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss