Thursday, August 18, 2022

Latest Posts

ಸೋಮವಾರದಿಂದಲೇ ಅಂತರ್ ದೇಶಿಯ ವಿಮಾನ ಹಾರಾಟ ಆರಂಭ: ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ

ರಾಜ್ಯಗಳ ವಿವೇಚನೆಗೆ ಕ್ವಾರಂಟೈನ್ ನಿಬಂಧನೆ ಜಾರಿ : ಸಚಿವ ಪುರಿ
ಹೊಸದಿಲ್ಲಿ: ಸೋಮವಾರದಿಂದ ಅಂತರ್ ದೇಶಿಯ ವಿಮಾನಗಳ ಹಾರಾಟ ಆರಂಭವಾಗಲಿದ್ದು ಪ್ರಯಾಣಿಕರಿಗೆ ನಾಗರಿಕ ವಿಮಾನಯಾನ ಇಲಾಖೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಪ್ರಯಾಣಿಕರ ಕ್ವಾರಂಟೈನ್ ವಿಚಾರದಲ್ಲಿ ಆಯಾ ರಾಜ್ಯಗಳೇ ಸಂದರ್ಭ ಹಾಗೂ ಸನ್ನಿವೇಶಕ್ಕನುಗುಣವಾಗಿ ತೀರ್ಮಾನ ಕೈಗೊಳ್ಳಲು ಇಲಾಖೆ ಸೂಚಿಸಿದೆ. ಈ ಸಂಬಂಧ ಕೇಂದ್ರ ವಿಮಾನಯಾನ ಮಂತ್ರಿ ಹರ್‌ದೀಪ್‌ಸಿಂಗ್ ಪುರಿ ಭಾನುವಾರ ಸಂಜೆ ಟ್ವೀಟ್ ಮಾಡಿದ್ದಾರೆ.
ನಿಬಂಧನೆಗಳ ಪ್ರಕಾರ ಪ್ರತಿಯೊಬ್ಬ ಪ್ರಯಾಣಿಕ ಆರೋಗ್ಯ ಸೇತು ಆಪ್ ಹೊಂದಿರಬೇಕು ಮತ್ತು ಪ್ರಯಾಣದ ವೇಳೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಪ್ರಯಾಣದ ಆರಂಭದ ವೇಳೆ ಥರ್ಮಲ್ ಸ್ಕ್ರೀನಿಂಗ್ ನಡೆಯುತ್ತೆ. ಪಾಸಿಟಿವ್ ಬಂದವರನ್ನು 14 ದಿನಗಳ ಕಾಲ ಕೋವಿಡ್ ಆರೋಗ್ಯ ಕೇಂದ್ರಗಳಲ್ಲಿ ಕ್ವಾರಂಟೈನ್‌ನಲ್ಲಿಡಲಾಗುತ್ತೆ. ನೆಗಟೀವ್ ಬಂದವರನ್ನು ಹೋಂ ಕ್ವಾರಂಟೈನ್‌ನಲ್ಲಿಡಲಾಗುತ್ತೆ . ಐಸಿಎಂಆರ್ ಮಾರ್ಗಸೂಚಿ ಅನುಸಾರ ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಯಲಿದೆ.
ಶೀಘ್ರವೇ ಉಡಾಣ್ ಸೇವೆ
ದೇಶದಲ್ಲಿ ಲಾಕ್‌ಡೌನ್ ಘೋಷಣೆಯಾದ ಮೇಲೆ ಸ್ಥಗಿತಗೊಂಡಿದ್ದ ಉಡಾಣ್ ಸೇವೆ ಶೀಘ್ರವೇ ಆರಂಭವಾಗಲಿದೆ. ಇದು ಗುಡ್ಡಗಾಡು ಪ್ರದೇಶಗಳ ವಿಮಾನ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ನಾಗರಿಕ ವಿಮಾನಯಾನ ಇಲಾಖೆ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!