Sunday, August 14, 2022

Latest Posts

ಸೋಮವಾರದಿಂದ ರಾಜ್ಯದಲ್ಲಿ ಲಸಿಕೆ ವಿತರಣೆ: ಸಚಿವ ಸುಧಾಕರ್

ಹೊಸದಿಗಂತ ವರದಿ ಚಿಕ್ಕಬಳ್ಳಾಪುರ :

ರಾಜ್ಯದಲ್ಲಿ ಸೋಮವಾರದಿಂದ ಕೊರೊನಾ ಲಸಿಕೆ ವಿತರಣೆ ಮಾಡಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಸಚಿವರು, ಶನಿವಾರ ಕೇಂದ್ರದಿಂದ ರಾಜ್ಯಕ್ಕೆ 13 ಲಕ್ಷದ 90 ಸಾವಿರ ಕೋವಿಡ್-19 ಲಸಿಕೆ ಬರಲಿದ್ದು,ಎಲ್ಲಾ ಜಿಲ್ಲೆಗಳಿಗೂ ಲಸಿಕೆ ಸರಬರಾಜು ಮಾಡಿ, ಸೋಮವಾರದಿಂದ ಲಸಿಕೆ ವಿತರಸಲಿದ್ದೇವೆ ಎಂದರು.

ಕೋವಿಡ್-19 ಕಂಟ್ರೋಲ್ ಮಾಡುವುದರಲ್ಲಿ ಭಾರತ ಯಶಸ್ವಿಯಾಗಿದೆ. ಇಡೀ ದೇಶದಲ್ಲಿ 9000 ಸಕ್ರಿಯ ಪ್ರಕರಣಗಳಿದ್ದು, ಶೇ.98ರಷ್ಟು ಜನ ಗುಣಮುಖರಾಗುತ್ತಿದ್ದಾರೆ. ಶೇ.1.2 ರಿಂದ ಶೇ.1.3 ರಷ್ಡು ಸಾವಿನ ಪ್ರಮಾಣ ಆಗಿದೆ. ಈ ಅಂಕಿ ಅಂಶಗಳೇ ರಾಜ್ಯಸರ್ಕಾರ ಯಶಸ್ವಿಯಾಗಿ ಕೊರೊನಾ ನಿರ್ವಹಣೆ ಮಾಡಿದೆ ಅನ್ನುವುದಕ್ಕೆ ನಿದರ್ಶನ. ಲಸಿಕೆಯ ವಿವರಗಳನ್ನು ಸಂಜೆಯೊಳಗೆ ತಿಳಿಸುತ್ತೇನೆ ಎಂದು ಮಾಹಿತಿ ನೀಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss