ಹೊಸ ದಿಗಂತ ವರದಿ, ಸೋಮವಾರಪೇಟೆ:
ವಿರಾಜಪೇಟೆ ಅರಮೇರಿಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳ ತಂದೆ ಆಲೂರುಸಿದ್ದಾಪುರದ ಜಂಗಮರ ಸಿದ್ಧಮಲ್ಲಯ್ಯ (101) (ಇಂದು)ಬುಧವಾರಸಂಜೆ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.
ಶರಣಪರಂಪರೆಯೊಂದಿಗೆ ಕೃಷಿಕರಾಗಿದ್ದ ಮೃತರಿಗೆ ಅರಮೇರಿ ಶ್ರೀಗಳು ಹಾಗೂ ರಾಜ್ಯ ಮಾಹಿತಿ ಆಯೋಗದ ನಿವೃತ್ತ ಆಯುಕ್ತ ರಾದ ವಿರೂಪಾಕ್ಷಪ್ಪ ಸೇರಿದಂತೆ ಏಳು ಮಂದಿ ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳು ಹಾಗೂ ಅಪಾರ ಬಂದು ಬಳಗವನ್ನಗಲಿ ದ್ದಾರೆ.
ಮೃತರ ಅಂತ್ಯಕ್ರಿಯೆಯು ನಾಳೆ (ಗುರುವಾರ)ಸಂಜೆ ವೀರಶೈವ ಲಿಂಗಾಯತ ವಿಧಿವಿಧಾನದಂತೆ ಆಲೂರುಸಿದ್ದಾಪುರದಲ್ಲಿ ನಡೆಯಲಿದೆ.