Wednesday, August 17, 2022

Latest Posts

ಸೋಮವಾರಪೇಟೆ| ಕಳ್ಳತನ ಮಾಡಲು ಹೋಗಿ ತನ್ನ ಹಣವನ್ನೇ ಕಳೆದುಕೊಂಡ!

ಸೋಮವಾರಪೇಟೆ: ಕಳ್ಳತನಕ್ಕೆ ಬಂದಿದ್ದ ಕಳ್ಳನೊಬ್ಬ ತನ್ನದೇ 988 ರೂ.ಗಳನ್ನು ಕಳೆದುಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಲಾಕ್‍ಡೌನ್ ಸಂದರ್ಭ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರ ಕೊಠಡಿಯ ಹೆಂಚು ತೆಗೆದು ಕಳ್ಳತನಕ್ಕೆ ಪ್ರಯತ್ನಪಟ್ಟ ಕಳ್ಳ ಕೊಠಡಿಯೊಳಗೆ ಇಳಿಯಲಾಗದೆ ವಾಪಾಸ್ಸು ತೆರಳಿದ್ದಾನೆ. ಆದರೆ ಆತನ ಜೇಬಿನಲ್ಲಿದ್ದ ಪರ್ಸ್ ಹಂಚಿನ ಮೇಲೆಯೇ ಬಿದ್ದಿದೆ.
ಪಿ.ಯು.ಸಿ.ಪರೀಕ್ಷಾ ದಿನವಾದ ಗುರುವಾರ ಕೊಠಡಿಯ ಬಾಗಿಲು ತೆಗೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಯಾವುದೇ ವಸ್ತು ಕಳ್ಳತನವಾಗಿಲ್ಲ. ಆದರೆ ಹೆಂಚಿನ ಮೇಲಿದ್ದ ಪರ್ಸ್ ಸಿಕ್ಕಿದೆ. ಹಣದ ಸಮೇತ ಪರ್ಸ್‍ನ್ನು ಪಟ್ಟಣದ ಪೊಲೀಸರಿಗೆ ನೀಡಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!