ಸೋಮವಾರಪೇಟೆ: ಟಿಂಬರ್ ತುಂಬಿಸಲು ಕಾಫಿ ತೋಟದಲ್ಲಿ ನಿಲ್ಲಿಸಿದ್ದ ಲಾರಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ಮಂಗಳವಾರ ರಾತ್ರಿ ಸಮೀಪದ ಹುಲ್ಲೂರಿಕೊಪ್ಪ ಗ್ರಾಮದಲ್ಲಿ ನಡೆದಿದೆ. ಶನಿವಾರಸಂತೆ ಜಾಕಿರ್ ಪಾಷ ಎಂಬವರ ಪತ್ನಿ ನಾಜಿಯಾ ತಬಸ್ಸುಂ ಅವರಿಗೆ ಸೇರಿದ ಗೂಡ್ಸ್ ಲಾರಿಯನ್ನು ಅನಿಲ್ ಅರುಣ್ ಅವರ ಕಾಫಿ ತೋಟದಲ್ಲಿ ನಿಲ್ಲಿಸಿದ್ದು, ಮಂಗಳವಾರ ರಾತ್ರಿ ಲಾರಿಗೆ ಬೆಂಕಿ ಹಚ್ಚಲಾಗಿದೆ, ಮುಂಭಾಗ ಸುಟ್ಟು ಕರಕಲಾಗಿದೆ. ಶನಿವಾರಸಂತೆಯ ಹರೀಶ್, ಧನಂಜಯ, ಸಕಲೇಶಪುರದ ರಘು, ಐಗೂರಿನ ಭರತ್ ಹಾಗೂ ಇತರರು ಲಾರಿಗೆ ಬೆಂಕಿ ಹಚ್ಚಿರಬಹುದು ಎಂದು ಜಾಕಿರ್ ಪಾಷ ಸೋಮವಾರಪೇಟೆ ಠಾಣೆಯಲ್ಲಿ ದೂರು ನೀಡಿದ ಹಿನ್ನೆಲೆಯಲ್ಲಿ ಠಾಣಾಧಿಕಾರಿ ಶಿವಶಂಕರ್ ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಪೆನ್ನೇಕರ್, ಡಿವೈಎಸ್ಪಿ ಶೈಲೇಂದ್ರ, ಸರ್ಕಲ್ ಇನ್ಸ್ಪೆಕ್ಟರ್ ನಂಜುಂಡೇಗೌಡ ಭೇಟಿ ನೀಡಿ ಪರಿಶೀಲಿಸಿದರು.