Friday, July 1, 2022

Latest Posts

ಸೋಮವಾರಪೇಟೆ| ಕೊರೋನಾ ಸೋಂಕಿತ ಭೇಟಿ: ಕರ್ಕಳ್ಳಿ ಗ್ರಾಮದಲ್ಲಿ ಆತಂಕದ ವಾತಾವರಣ

ಸೋಮವಾರಪೇಟೆ: ಕೊರೋನಾ ಸೋಂಕು ದೃಢಪಟ್ಟಿರುವ ಶಿರಂಗಾಲ ಹಣ್ಣಿನ ವ್ಯಾಪಾರಿಯ ಸಂಬಂಧಿಕರು ಇರುವ ಇಲ್ಲಿನ ಕರ್ಕಳ್ಳಿ ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಸ್ಥಳಕ್ಕೆ ವಿವಿಧ ಇಲಾಖೆಯ ಅಧಿಕಾರಿಗಳ ದೌಡಾಯಿಸಿದ್ದು, ವ್ಯಾಪಾರಿಯ ಸಂಬಂಧಿಕರ ಎರಡು ಮನೆಗಳನ್ನು ಪರಿಶೀಲಿಸುವುದರೊಂದಿಗೆ ಸಂಪೂರ್ಣ ಸ್ಯಾನಿಟೈಝ್ ಮಾಡಲಾಗಿದೆ.
ಪ್ರಾಥಮಿಕ ಸಂಪರ್ಕದಲ್ಲಿದ್ದ 10 ಮಂದಿ ಹಾಗೂ 2ನೇ ಹಂತದ ಸಂಪರ್ಕದಲ್ಲಿದ್ದ 19 ಮಂದಿಯ ಆರೋಗ್ಯ ತಪಾಸಣೆ ಮಾಡಲಾಗಿದೆ.
ನೇರುಗಳಲೆ ಪಂಚಾಯಿತಿಯಲ್ಲಿರುವ ಹೆಂಡತಿ ತವರು ಮನೆ ಹಾಗೂ ಬೇಳೂರು ಪಂಚಾಯಿತಿಯಲ್ಲಿರುವ ದೊಡ್ಡಮ್ಮನ ಮನೆಗಳಿಗೂ ಹಣ್ಣಿನ ವ್ಯಾಪಾರಿ ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ ಸಂಬಂಧಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.
ವ್ಯಾಪಾರಿಯು ಸೋಮವಾರ ಬೆಳಗ್ಗೆ 3 ಗಂಟೆಯಿಂದ 7 ಗಂಟೆಯವರೆಗೆ ಸೋಮವಾರಪೇಟೆ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಿದ್ದು, ಈ ಅವಧಿಯಲ್ಲಿ ಮಾರುಕಟ್ಟೆಗೆ ಹೋಗಿದ್ದವರು ಸ್ವಯಂ ಪ್ರೇರಣೆಯಿಂದ ಸಮೀಪದ ಸರ್ಕಾರಿ ಆಸ್ಪತ್ರೆಗೆ ತೆರಳಿ ಗಂಟಲು,ಮೂಗು ದ್ರವ ಪರೀಕ್ಷಿಸಿಕೊಳ್ಳುವಂತೆ ಧ್ವನಿವರ್ಧಕದ ಮೂಲಕ ಪ್ರಚಾರ ಮಾಡಲಾಗುತ್ತಿದೆ.
ಸೋಮವಾರಪೇಟೆ ಪಟ್ಟಣ, ಆರ್.ಎಂ.ಸಿ. ಮಾರುಕಟ್ಟೆ , ಕರ್ಕಳ್ಳಿಯ ಸಂಪೂರ್ಣ ಗ್ರಾಮಕ್ಕೆ ಮುಂಜಾಗ್ರತಾ ಕ್ರಮವಾಗಿ ಔಷಧಿ ಸಿಂಪಡಿಸಲು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿರುವ ತಹಶೀಲ್ದಾರ್ ಗೋವಿಂದ ರಾಜು ಹಾಗೂ ತಾಲೂಕು ಆರೋಗ್ಯಾಧಿಕಾರಿ ಶ್ರೀನಿವಾಸ್ ಅವರುಗಳು, ಶೀತ, ಜ್ವರ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ಆಸ್ಪತ್ರೆಗೆ ಬರುವಂತೆ ಸೂಚನೆ ನೀಡಿದ್ದಾರೆ.
ಸ್ಥಳಕ್ಕೆ ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಸುನಿಲ್, ಸಬ್ ಇನ್ಸ್‍ಪೆಕ್ಟರ್ ಶಿವಶಂಕರ್, ಕಂದಾಯ ಪರಿವೀಕ್ಷಕ ವಿನು, ಗ್ರಾಮ ಲೆಕ್ಕಾಧಿಕಾರಿ ಕುಮಾರಿ, ಬೇಳೂರು ಗ್ರಾ.ಪಂ. ಪಿ.ಡಿ.ಓ ಹಾಗೂ ಜನಪ್ರತಿನಿಧಿಗಳು ಭೇಟಿ ನೀಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss