Thursday, July 7, 2022

Latest Posts

ಸೋಮವಾರಪೇಟೆ ಪ.ಪಂ. ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಕಸ ಎಸೆದರೆ ಬೀಳಲಿದೆ 25 ಸಾವಿರ ರೂ. ದಂಡ

ಹೊಸ ದಿಗಂತ ವರದಿ, ಮಡಿಕೇರಿ:

ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವುದು, ಕಸ ಬೇರ್ಪಡಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಮಲಮೂತ್ರ ವಿಸರ್ಜನೆ ಮಾಡುವುದು, ರಸ್ತೆ ಮತ್ತು ಖಾಲಿ ಜಾಗದಲ್ಲಿ ಕಟ್ಟಡದ ತ್ಯಾಜ್ಯ ವಿಲೇ ಮಾಡುವುದು ಮುಂತಾದ ಪ್ರಕರಣಗಳು ಕಂಡುಬಂದಲ್ಲಿ ಕರ್ನಾಟಕ ಪೌರಸಭೆಗಳ ಘನತ್ಯಾಜ್ಯ ನಿರ್ವಹಣಾ ಮಾದರಿ ನಿಯಮಗಳ ಅನ್ವಯ ನಿಗದಿಪಡಿಸಲಾದ ರೂ.100 ರಿಂದ 25,000 ತನಕ ದಂಡ ವಿಧಿಸಲಾಗುವುದು ಎಂದು ಮುಖ್ಯಾಧಿಕಾರಿ ಪಿ.ಕೆ.ನಾಚಪ್ಪ ಅವರು ಎಚ್ಚರಿಸಿದ್ದಾರೆ.
ಸೋಮವಾರಪೇಟೆ ಪಟ್ಟಣ ಪಂಚಾಯತ್ ವ್ಯಾಪ್ತಿಯನ್ನು ಬಯಲು ಮಲ ವಿಸರ್ಜನೆ ಮುಕ್ತ ಪಟ್ಟಣ ಮಾಡುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮ ಕೈಗೊಳ್ಳಲಾಗಿದೆ. ಆ ದಿಸೆಯಲ್ಲಿ 2018ರ ಜೂ. ತಿಂಗಳಿನಲ್ಲಿ ಮೊದಲ ಬಾರಿಗೆ ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ  ವತಿಯಿಂದ ಸೋಮವಾರಪೇಟೆ ಪಟ್ಟಣವನ್ನು ‘ಬಯಲು ಮಲ ವಿಸರ್ಜನೆ ಮುಕ್ತ ಪಟ್ಟಣ’ ಎಂದು ಘೋಷಿಸಲಾಗಿದೆ. ಬಳಿಕ ಅದೇ
ಸಂಸ್ಥೆಯು ಸೋಮವಾರಪೇಟೆ ಪಟ್ಟಣದಲ್ಲಿ ಮರು ಪರಿಶೀಲನೆ ನಡೆಸಿ ಮತ್ತೆ ಬಯಲು ಮಲ ವಿಸರ್ಜನೆ ಮುಕ್ತ ಪಟ್ಟಣ  ಪ್ರಮಾಣ ಪತ್ರ ನೀಡಿದೆ ಎಂದು ಅವರು ವಿವರಿಸಿದ್ದಾರೆ.

ಸಾರ್ವಜನಿಕರ ಸಹಕಾರ ಅಗತ್ಯ 
ಸೋಮವಾರಪೇಟೆ ಪಟ್ಟಣ ಪಂಚಾಯತ್ ವ್ಯಾಪ್ತಿಯನ್ನು ‘ಬಯಲು ಮಲ ವಿಸರ್ಜನೆ ಮುಕ್ತ ಪಟ್ಟಣ’ ವೆಂದು ಈಗಾಗಲೇ
ಘೋಷಿಸಲಾಗಿದ್ದು, ಈ ದಿಸೆಯಲ್ಲಿ ಪಟ್ಟಣದ ಸ್ವಚ್ಛತೆಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಪಟ್ಟಣ ಪಂಚಾಯತ್
ಮುಖ್ಯಾಧಿಕಾರಿ ತಿಳಿಸಿದರು.

ಆಕ್ಷೇಪಣೆಗಳಿದ್ದಲ್ಲಿ 15 ದಿನದೊಳಗೆ ದೂರು ಸಲ್ಲಿಸಿ

ಸೋಮವಾರಪೇಟೆ ಪಟ್ಟಣವನ್ನು ಈಗಾಗಲೇ ಬಯಲು ಮಲ ವಿಸರ್ಜನೆ ಮುಕ್ತ ಪಟ್ಟಣ ಎಂದು ಘೋಷಣೆ ಮಾಡಿರುವುದರಿಂದ
ಹಾಗೂ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಸುಧಾರಿತ ಮತ್ತು ಹೆಚ್ಚು ಸುಧಾರಿತ ಬಯಲು
ಮಲ ವಿಸರ್ಜನೆ ಮುಕ್ತ ಪಟ್ಟಣ ಎಂದು ಪ್ರಮಾಣಿಕರಣದ ಘೋಷಣೆಗಾಗಿ ಬೇಕಾಗಿರುವ ಷರತ್ತುಗಳನ್ನು ಪೂರೈಸಿದೆ. ಈ ಬಗ್ಗೆ ಯಾವುದಾದರೂ ಆಕ್ಷೇಪಣೆಗಳಿದ್ದಲ್ಲಿ 15 ದಿನದೊಳಗೆ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಕಚೇರಿಗೆ ಲಿಖಿತವಾಗಿ ದೂರು ಸಲ್ಲಿಸಬಹುದಾಗಿದೆ ಎಂದು ಮುಖ್ಯಾಧಿಕಾರಿ ಕೋರಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss