Tuesday, June 28, 2022

Latest Posts

ಸೋಮವಾರಪೇಟೆ| ಮಾರುತಿ ಸ್ವಿಫ್ಟ್ ಕಾರು- ಬೈಕ್ ನಡುವೆ ಅಪಘಾತ: ಸವಾರನಿಗೆ ತೀವ್ರ ಗಾಯ

ಸೋಮವಾರಪೇಟೆ: ಇಲ್ಲಿನ ಮಡಿಕೇರಿ ರಸ್ತೆಯ ಬಳಿ ಮಾರುತಿ ಸ್ವಿಪ್ಟ್ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ದ್ವಿಚಕ್ರ ವಾಹನ ಸವಾರ ತೀವ್ರ ಗಾಯಗೊಂಡ ಘಟನೆ ನಡೆದಿದೆ. ಭಾನುವಾರ ಸಂಜೆ ಸ್ಥಳೀಯ ಖಾಸಗಿ ಸಂಸ್ಥೆಯ ಉದ್ಯೋಗಿ ಕೆ.ಡಿ. ಮುತ್ತಣ್ಣ ಕೆಲಸ ಮುಗಿಸಿ ಕುಸುಬೂರು ಗ್ರಾಮದ ಮನೆಗೆ ತೆರಳುತ್ತಿದ್ದ ಸಂದರ್ಭ, ಸಫಾಲಿ ಬಾರ್ ಎದುರಿನ ತಿರುವಿನಲ್ಲಿ ಕಾರು ಡಿಕ್ಕಿ ಹೊಡೆದಿದ್ದು, ಮುತ್ತಣ್ಣ ಅವರ ಬಲಗಾಲಿನ ಮಂಡಿಗೆ ತೀವ್ರ ಪೆಟ್ಟಾಗಿದ್ದು, ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಗಾಗಿದ್ದಾರೆ.
ಕಾರು ಚಾಲಕ ಕುಮಾರಳ್ಳಿ ಬಾಚಳ್ಳಿ ಗ್ರಾಮದ ರಾಘವೇಂದ್ರ ಅವರ ವಿರುದ್ಧ ಸೋಮವಾರಪೇಟೆ ಠಾಣೆಯಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆ ದೂರು ನೀಡಲಾಗಿದೆ.
ಚಾಲಕನ ನಿಯಂತ್ರಣ ತಪ್ಪಿದ ಕಾರು: ಮತ್ತೊಂದೆಡೆ ಇಲ್ಲಿಗೆ ಸಮೀಪದ ಬಳಗುಂದ ಸರ್ಕಾರಿ ಶಾಲೆಯ ಎದುರು ಪಟ್ಟಣದಿಂದ ಕುಶಾಲನಗರದ ಕಡೆಗೆ ತೆರಳುತ್ತಿದ್ದ ಮಹಿಂದ್ರ ಝೈಲೊ ಕಾರು ಚಾಲಕನ ಅಜಾಗರೂಕತೆಯಿಂದ ತಲೆ ಕೆಳಗಾಗಿ ಮಗುಚಿಕೊಂಡಿದ್ದು, ಅದೃಷ್ಟವಶಾತ್ ಚಾಲಕ ಸೇರಿದಂತೆ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss