ಸೋಮವಾರಪೇಟೆ| ವಾಹನ-ಮನೆಗಳಿಗೆ ಕಲ್ಲು ತೂರಿದಾತ ಈಗ ಪೊಲೀಸ್ ಅತಿಥಿ!

0
82

ಸೋಮವಾರಪೇಟೆ: ರಂಜಾನ್ ಹಬ್ಬದಂದು ಪಟ್ಟಣದ ಮಹದೇಶ್ವರ ಬ್ಲಾಕ್ನೇಲ್ಲಿ ಮನೆ ಮತ್ತು ಕಾರುಗಳಿಗೆ ಕಲ್ಲು ತೂರಿ ಜಖಂಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಹದೇಶ್ವರ ಬ್ಲಾಕ್ ನಿವಾಸಿ ಸಂತೋಷ್ ಬಂಧಿತ ಆರೋಪಿ. ಏ.24 ರ ಮಧ್ಯರಾತ್ರಿ ಎಂ.ಡಿ.ಬ್ಲಾಕ್ನೋ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಅಬಕಾರಿ ಇಲಾಖೆಯ ಒಂದು ಜೀಪು ಸೇರಿದಂತೆ ನಾಲ್ಕು ಕಾರುಗಳಿಗೆ ಕಲ್ಲು ತೂರಿ ಗಾಜನ್ನು ಜಖಂಗೊಳಿಸಲಾಗಿತ್ತು. ನಂತರ ಮೊಕದ್ದಮೆ ದಾಖಲಿಸಿಕೊಂಡ ಪೊಲೀಸರು ಸಿ.ಸಿ.ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಘಟನೆಗೆ ಕಾರಣ ತಿಳಿದು ಬಂದಿಲ್ಲವಾದರೂ, ಮದ್ಯದ ಅಮಲಿನಲ್ಲಿ ಆತ ಈ ಕೃತ್ಯ ನಡೆಸಿರುವುದಾಗಿ ಹೇಳಲಾಗಿದೆ.
ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ.. ಡಿವೈಎಸ್ಪಿಂ ಎಚ್.ಎಂ. ಶೈಲೇಂದ್ರ, ಸಿಪಿಐ ನಂಜುಡೇಗೌಡ ಅವರುಗಳ ಮಾರ್ಗದರ್ಶನದಲ್ಲಿ, ಪಿಎಸ್ಐ್ ಶಿವಶಂಕರ್, ಸಿಬ್ಬಂದಿಗಳಾದ ಮಧು, ಪ್ರವೀಣ್, ಸಜೀ, ಸಂದೇಶ್, ನವೀನ್, ರಮೇಶ್, ಮಂಜು, ರಾಜೇಶ್, ಗಿರೀಶ್ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here