Monday, August 8, 2022

Latest Posts

ಸೋಮವಾರಪೇಟೆ| ವಾಹನ ಹಾಗೂ ಮನೆಗಳ ಮೇಲೆ ಕಲ್ಲು ತೂರಾಟ

ಸೋಮವಾರಪೇಟೆ: ನಿಲ್ಲಿಸಿದ್ದ ವಾಹನಗಳಿಗೆ ಹಾಗೂ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿ ದುಷ್ಕರ್ಮಿಗಳು ಪುಂಡಾಟ ನಡೆಸಿರುವ ಘಟನೆ ಭಾನುವಾರ ತಡ ರಾತ್ರಿ ಪಟ್ಟಣದಲ್ಲಿ ನಡೆದಿದೆ.

ಸೋಮವಾರಪೇಟೆ ಪಟ್ಟಣದ ಮಹದೇಶ್ವರ ಬಡಾವಣೆಯಲ್ಲಿ ಮನೆ ಮುಂಭಾಗದಲ್ಲಿ ನಿಲ್ಲಿಸಿದ್ದ ನಾಲ್ಕು ಕಾರುಗಳ ಮೇಲೆ ಕಲ್ಲು ತೂರಲಾಗಿದ್ದು, ಅವರುಗಳು ಗಾಜುಗಳು ಪುಡಿಪುಡಿಯಾಗಿವೆ. ಮತ್ತೊಂದೆಡೆ ಅಬಕಾರಿ ಇಲಾಖೆಯ ಜೀಪ್‌ನ ಮೇಲೂ ಕಲ್ಲು ತೂರಿರುವ ದುಷ್ಕರ್ಮಿಗಳು, ಪುಷ್ಪಾ ಎಂಬವರ ಮನೆಗೂ ಕಲ್ಲು ತೂರಿ ಕಿಟಕಿ ಗಾಜನ್ನು ಪುಡಿಗಟ್ಟಿದ್ದಾರೆ.

ರಾತ್ರಿ ಕರ್ಫ್ಯೂವಿನ ಅವಕಾಶ ಬಳಸಿಕೊಂಡು ಮಧ್ಯರಾತ್ರಿ 12ರಿಂದ 1 ಗಂಟೆ ಸಮಯದಲ್ಲಿ ಪುಂಡರು ತಮ್ಮ ಪುಂಡಾಟ ಮೆರೆದಿದ್ದಾರೆ. ರಾತ್ರಿ ಶಬ್ಧ ಕೇಳಿ ಬಂದರೂ ಹೊರ ಬರಲು ಭಯಗೊಂಡಿದ್ದಾಗಿ ಹೇಳಲಾಗಿದೆ.

ಸ್ಥಳಕ್ಕೆ ಪೊಲೀಸ್ ಇನ್ಸ್‌ಪೆಕ್ಟರ್ ಶಿವಶಂಕರ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ಪುಂಡರ ಬಂಧನಕ್ಕೆ ಬಲೆ ಬೀಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss