Saturday, July 2, 2022

Latest Posts

ಸೋಯಾಬೀನ್ ಬದಲು ಬೇರೆ ಬೆಳೆ ಬೆಳೆಸಲು ರೈತರು ಮುಂದಾಗುವಂತೆ ಕೃಷಿ ಸಚಿವ ಬಿ.ಸಿ.ಪಾಟೀಲ ಮನವಿ

ಹಾವೇರಿ: ಸೋಯಾಬೀನ್ ಬಿತ್ತನೆ ಬೀಜದ ಮೊಳಕೆ ಪ್ರಮಾಣ ಕಡಿಮೆ ಆಗಿರುವುದರಿಂದಾಗಿ ಸೋಯಾಬೀನ್ ಬದಲು ಬೇರೆ ಬೆಳೆಯನ್ನು ಬೆಳೆಯುವಕ್ಕೆ ರೈತರು ಮುಂದಾಗುವಂತೆ ಕೃಷಿ ಸಚಿವ ಬಿ.ಸಿ.ಪಾಟೀಲ ರೈತರಲ್ಲಿ ಮನವಿ ಮಾಡಿಕೊಂಡರು.
ಸೋಮವಾರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಆಯೋಜಿದಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ದೋಯಾಬೀನ್ ಫಸ;ಲು ಕೋಯ್ಲು ಸಮಯಕ್ಕೆ ದೇಶಾದ್ಯಂತ ಅಧಿಕ ಮಳೆಯಿಂದಾದ ಅತಿವೃಷ್ಠಿಗೆ ಸಿಲುಕಿದ್ದರಿಂದಾಗಿ ಮೊಳಕೆ ಪ್ರಮಾಣ ಕಡಿಮೆಯಾಗುತ್ತಿದೆ. ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮೊಳಕೆ ಪ್ರಮಾಣ ಬಹಳ ಕಡಿಮೆ ಆಗಿರುವುದು ಕಂಡುಬಂದಿದೆ ಈ ಹಿನ್ನಲೆಯಲ್ಲಿ ರೈತರು ಸೋಯಾಬೀನ್ ಬದಲಿಗೆ ಬೇರೆ ಬೆಳೆಗಳನ್ನು ಬೆಳೆಯುವಕ್ಕೆ ಆದ್ಯತೆಯನ್ನು ನೀಡುವಂತೆ ಅವರು ಕೇಳಿಕೊಂಡರು.
ರಾಜ್ಯದಲ್ಲಿ ಬಿತ್ತನೆಗೆ ಬೇಕಾಗುವ ಸೋಯಾಬೀನ್ ಬಿತ್ತನೆ ಬೀಜವನ್ನು ಮಧ್ಯಪ್ರದೇಶ ಮತ್ತು ಆಂದ್ರಪ್ರದೇಶ ರಾಜ್ಯಗಳಿಂದ ತರಿಸಿಕೊಳ್ಳಲಾಗುತ್ತದೆ ಕಳೆದ ವರ್ಷ ಸುರಿವ ಅಧಿಕ ಮಳೆಯಿಂದಾಗಿ ಪ್ರಸಕ್ತ ವರ್ಷ ಸೀಡ್ ಜರ್ಮಿನೇಶನ್ ಕಡಿಮೆ ಪ್ರಮಾಣದಲ್ಲಿ ಆಗುತ್ತಿದೆ. ಈ ಹಿಂದೆ ಕೇಂದ್ರ ಸರ್ಕಾರ ಸೋಯಾಬೀನ್ ಬಿತ್ತನೆ ಬೀಜದಲ್ಲಿ ಶೇ.೭೦ ರಷ್ಟು ಮೊಳಕೆ ಪ್ರಮಾಣವನ್ನು ಪ್ರಮಾಣೀಕರಿಸುತ್ತಿತ್ತು ಆದರೆ ಪ್ರಸಕ್ತ ಸಾಲಿನಲ್ಲಿ ಶೇ.೬೫ ರಷ್ಟು ಮೊಳಕೆ ಪ್ರಮಾಣವನ್ನು ನಿಗದಿ ಮಾಡಿದೆ ಎಂದರು.
ಹಾವೇರಿ ಜಿಲ್ಲೆಯಲ್ಲಿ ಮೊಳಕೆ ಆಗದ ಬಿತ್ತನೆ ಬೀಜದ ಕಂಪನಿಗಳಿಂದ ಕೃಷಿ ಚಟುವಟಿಕೆ, ರಸಗೊಬ್ಬರ ಮತ್ತು ಕೃಷಿ ಕಾರ್ಮಿಕರ ವೆಚ್ಚವೆಂದು ಪ್ರತಿ ಎಕರೆಗೆ ೩ ಸಾವಿರದಂತೆ ತಾತ್ಕಾಲಿಕವಾಗಿ ರೈತರಿಗೆ ಪರಿಹಾರವನ್ನು ಮತ್ತು ಬಿತ್ತನೆ ಬೀಜದ ಬದಲಿಗೆ ಅದೇ ಪ್ರಮಾಣದ ಬೇರೆ ಬಿತ್ತನೆ ಬೀಜವನ್ನು ಕೃಷಿ ಇಲಾಖೆಯಿಂದ ವಿತರಿಸಲಾಗುತ್ತಿದೆ ಎಂದು ಹೇಳಿದರು
ರೈತರಿಗೆ ಪರಿಹಾರ ಮತ್ತು ಮುಂದೆ ಇದಕ್ಕೆ ಪರ್ಯಾಯವಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸುವುದಕ್ಕೆ ಮಂಗಳವಾರ ಬೆಂಗಳೂರಿನಲ್ಲಿ ಸೋಯಾಬೀನ್ ವಿತರಕರ ಸಭೆಯನ್ನು ಕರೆಯಲಾಗಿದೆ. ಸಭೆಯಲ್ಲಿ ಚರ್ಚೆ ನಂತರ ಸೂಕ್ತ ನಿರ್ಧಾರಕ್ಕೆ ಬರಲಾಗುವುದು ಎಂದರು.
ದೇಶಾದ್ಯಂತ ಸೋಯಾಬೀನ್ ಬಿತ್ತನೆ ಬೀಜದ ಸಮಸ್ಯೆ ಆಗಿದೆ. ರಾಜ್ಯಕ್ಕೆ ಬಿತ್ತನೆ ಬೀಜವನ್ನು ತರಿಸುವ ಸಂದರ್ಭದಲ್ಲಿ ಮಧ್ಯಪ್ರದೇಶದ ಇಂಧೂರಿನಲ್ಲಿ ೭ ಸಾವಿರ ಜನರಿಗೆ ಕೊರೋನಾ ಸೋಂಕು ಕಂಡುಬಂದಿದ್ದರಿಂದ ಪ್ಯಾಕ್ ಮಾಡಲು ಸಾಧ್ಯವಾಗದೇ ರಾಜ್ಯಕ್ಕೆ ನಿಗದಿತ ಪ್ರಮಾಣದಲ್ಲಿ ಬಿತ್ತನೆ ಬೀಜದ ಸರಬರಾಜು ಆಗದೇ ಇದ್ದುದರಿಂದಾಗಿ ಮತ್ತು ಪ್ರಸಕ್ತ ಮೊಳಕೆ ಪ್ರಮಾಣದಲ್ಲಿ ಆದ ತೊಂದರೆಯಿಂದಾಗಿ ಇನ್ನು ಮುಂದೆ ಸೋಯಾಬೀನ್ ಬಿತ್ತನೆ ಬೀಜದ ಕೊರತೆ ಆಗುವುದರಲ್ಲಿ ಸಂಶಯವಿಲ್ಲ ಹೀಗಾಗಿ ರೈತರು ಬೇರೆ ಬೆಳೆಯನ್ನು ಬೆಳೆಯುವದಕ್ಕೆ ಮುಂದಾಗುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.
ರಾಜ್ಯದಲ್ಲಿ ಪ್ರಮುಖವಾಗಿ ಬೆಳಗಾವಿ, ಧಾರವಾಡ, ಬೀದರ, ಗುಲಬರ್ಗ, ರಾಯಚೂರ ಜಿಲ್ಲೆಗಳಲ್ಲಿ ಅಧಿಕ ಪ್ರಮಾಣದಲ್ಲಿ ಸೋಯಾಬೀನ್ ಬೇಳೆಯುತ್ತಾರೆ ಇನನು ಹಾವೇರಿ ಸೇರಿದಂತೆ ಇನ್ನು ಕೆಲ ಜಿಲ್ಲೆಗಳಲ್ಲಿಯೂ ಇದನ್ನು ಬೆಳೆಯುತ್ತಾರೆ. ವಾಡಿಕೆಯಂತೆ ಪ್ರತಿ ಎಕರೆಗೆ ೩೦ ಕೇಜಿ ಬಿತ್ತನೆ ಮಾಡುವಂತೆ ಸಿಫಾರಸ್ಸು ಮಾಡಲಾಗುತ್ತದೆ ಆದರೆ ಪ್ರಸಕ್ತ ವರ್ಷ ಮೊಳಕೆ ಪ್ರಮಾಣ ಕಡಿಮೆ ಆಗಿದ್ದರಿಂದ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಮಾಡುವ ಮೂಲಕ ಇದನ್ನು ಸರಿ ಪಡಿಸಿಕೊಳ್ಳುವಂತೆ ತಂಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಈ ಕುರಿತು ಒಂದೆರಡು ದಿನಗಳಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss