Thursday, August 11, 2022

Latest Posts

ಸೋಲು ಸಾವಲ್ಲ ಗೆಲುವು: ಸೋಲು ಸಾಧನೆಯ ಮೆಟ್ಟಿಲು! ಸೋತ ಮನಸ್ಸಿಗೆ ಪ್ರೋತ್ಸಾಹದ ಟಾನಿಕ್ ಇಲ್ಲಿದೆ..

ಜೀವನದಲ್ಲಿ ಸೋಲುನ್ನು ಅನುಭವಿಸದೆ ದೊಡ್ಡ ಸಾಧನೆ ಮಾಡಿದವರ ಸುಳಿವಯ ಇರುವುದಿಲ್ಲ. ಜೀವನಲ್ಲಿ ನಮ್ಮ ಸೋಲುಗಳಿಗೆ ಮೆಟ್ಟಲುಗಳಾದವರು ಕೆಲವರಾದರೆ ನಮ್ಮ ಸೋಲನ್ನು ಕಂಡು ಎಂಜಾಯ್ ಮಾಡುವವರು ಅಷ್ಟೇ ಇರುತ್ತಾರೆ. ನಮ್ಮ ಸೋಲನ್ನು ಕಂಡು ಖುಷಿ ಪಡುವುದರಿಂದ ಏನು ಲಾಭ ಇದೆಯೋ ಅರಿಯೆ.

ಆದರೆ ಸೋಲೆಂಬುದು ಎಂದಿಗೂ ಶಾಶ್ವತವಲ್ಲ. ಸೋಲನ್ನು ಅಣುಭವಿಸಿದವರು ಜೀವನದಲ್ಲಿ ಮತ್ತೆ ಎದ್ದು ನಿಂತು ಸಾಧನೆಯ ಹಾದಿಯಲ್ಲಿ ನಿಲ್ಲಬೇಕು. ಎದ್ದು ನಿಲ್ಲುವವನು ದೊಡ್ಡದಾಗಿಯಲ್ಲದಿದ್ದರು, ಸಣ್ಣ ಹೆಚ್ಚೆಯನ್ನಾದರು ಇಡಲು ಮುಂದಾಗಬೇಕು.

ಸೋತ ಮನಸ್ಸಿಗೆ ಒಂದಿಷ್ಟು ಟಾನಿಕ್ ನೀಡುವ ಪ್ರಯತ್ನ ನಮ್ಮದು. ಈ ಟಾನಿಕ್ ಇಂದ ನಿಮ್ಮ ಜೀವನ ನಗುವ ಮಗುವಿನಂತೆ ಕಾಣಲಿ

ಭಾವನೆಯನ್ನು ಅಪ್ಪಿಕೊಳ್ಳಿ: ನಿಮ್ಮ ಭಾವನೆಗಳನ್ನು ಸ್ವೀಕರಿಸಲು ನೀವು ಸಿದ್ದರಾಗಿ. ನಿಮ್ಮ ಭಾವನೆಗಳನ್ನು ನೀವು ಗೌರವಿಸಬೇಕು ಹಾಗೂ ನಿಮ್ಮ ಭಾವನೆಗಳನ್ನು ಸ್ವಲ್ಪ ವೇಳೆ ಅನುಭವಿಸಿ. ಅದರಿಂದ ನಿಮ್ಮನ್ನು ನೀವು ಅರಿತುಕೊಳ್ಳಲು ಒಂದು ಉತ್ತಮ ಅವಕಾಶ ಸಿಗಲಿದೆ.

ಸೋಲಿನ ನೋವಿಗೆ ಪರಿಹಾರ ಹುಡುಕಿ: ನಿಮ್ಮ ಜೀವನದಲ್ಲಿ ನಡೆದ ಅಹಿತಕರ ಘಟನೆಯನ್ನು ಮರೆತು ಮುಂದೆ ಸಾಗಲು ಒಂದಿಷ್ಟು ಒಳ್ಳೆ ಅಭ್ಯಾಸ ಮಾಡಿಕೊಳ್ಳಿ, ನಿಮ್ಮ ಕೌಶಲ್ಯಗಳನ್ನು ವೃದ್ಧಿಗೊಳಿಸಲು ಬೇಕಾದ ಕಾರ್ಯಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ.  

ಆರೋಗ್ಯಕರ ಕೌಶಲ್ಯ ಅಭ್ಯಾಸ: ನಿಮ್ಮ ಮನಸ್ಸಿನಲ್ಲಿರುವ ನೋವನ್ನು ಕಡಿಮೆ ಗೊಳಿಸಲು ನಿಮ್ಮ ಸ್ನೇಹಿತರ ಜೊತೆ ಮಾತನಾಡಿ, ಪ್ರಾಣಾಯಾಮ ಮಾಡಿ, ಒಂದು ವಾಕ್ ಹೋಗಿ ಬನ್ನಿ, ಕಲಾಕೃತಿ ಮಾಡಿ, ಜಂಕ್ ಫುಡ್ ಬದಲಿಗೆ ಆರೋಗ್ಯಕರ ಊಟದ ಪಟ್ಟಿ ರಚಿಸಿ ಅದನ್ನು ಅನುಸರಿಸಿ ನಿಮ್ಮೊಳಗಿನ ವಿಭಿನ್ನ ಕಲೆಯನ್ನು ಹೊರಗೆ ತನ್ನಿ.

ವೈಫಲ್ಯಗಳಲ್ಲಿನ ನಂಬಿಕೆ: ನಿಮ್ಮ ವೈಫಲ್ಯ, ಸೋಲುಗಳಿಂದ ನಿಮ್ಮ ಮನಸ್ಸಿನಲ್ಲಿ ಅಡಗಿರುವ ವಿಚಾರಗಳನ್ನು ಅರ್ಥ ಮಾಡಿಕೊಳ್ಳಿ. ನಿಮ್ಮ ಸೋಲಿನಿಂದ ನಿಮ್ಮನ್ನು ಯಾರೂ ಇಷ್ಟಪಡುವುದಿಲ್ಲ ಎಂಬ ಮನಸ್ಥಿತಿಯನ್ನು ಕೈಬಿಟ್ಟರೆ ನೀವು ಸೋಲಿನ ಬೇಸರದ ಮನಸ್ಥಿತಿಇಯಿಂದ ಹೊರಬರಲು ಸಹಾಯವಾಗಿದೆ.

ಆತ್ಮ ಸ್ಥೈರ್ಯ ಬೆಳಸಿಕೊಳ್ಳಿ: ಸೋತೆನೆಂದು ಸುಮ್ಮನೆ ಕೊರಗಬೇಡಿ. ಅದರ ಬದಲು ನೀವು ನಿಮ್ಮ ಮುಂದಿನ ಜೀವನಕ್ಕೆ ಮತ್ತಷ್ಟು ಹೊಸ ಚಾಲೆಂಜ್ ಗಳನ್ನು ಕೊಡಿ.

ಸದ್ಯ ಬಂದಿರುವ ಸೋಲಿನಿಂದ ಶೀಘ್ರ ಹೊರಬರುತ್ತೇನೆ ಎಂದು ನಿಮ್ಮನ್ನು ನೀವೇ ಪ್ರೇರೇಪಿಸಿಕೊಳ್ಳಿ.
ಈ ಸೋಲನ್ನು ನಾನು ಭರಿಸಬಲ್ಲೆ.
ಈ ಸೋಲಿನಿಂದ ನಾನು ಮತ್ತಷ್ಟು ಕಲಿತಿದ್ದೇನೆ ಎಂದು ಪಾಸಿಟಿವ್ ಆಲೋಚನೆ ನೀಡಿ.

ಸಾಧಕ ಸೋಲುಗಾರರ ಬಗ್ಗೆ ತಿಳಿಯಿರಿ: ಜೀವನದಲ್ಲಿ ನಾವು ಅನುಭವಿಸಿದ ನೋವು, ಕಷ್ಟ ಹಾಗೂ ಸಲುಗಳಿಂದ ಕುಗ್ಗದೆ. ಇದೇರೀತಿಯಲ್ಲಿ ಸೋಲನ್ನು ಗೆಲುವಿನ ಮೆಟ್ಟಿಲು ಮಾಡಕೊಂಡು ಬದುಕುತ್ತಿರುವವರ ಕುರಿತು ತಿಳಿದುಕೊಳ್ಳಿ.

ಸೋಲಿಂದ ಏನು ಕಲಿತಿರುವಿರಿ? ನಿಮ್ಮ ಸೋಲಿನಿಂದ ನೀವು ಏನೆಲ್ಲಾ ಕಲಿತುಕೊಂಡಿದ್ದೀರ ಎಂದು ನಿಮ್ಮನ್ನು ನೀವು ಪ್ರಶ್ನೆ ಮಾಡಿಕೊಳ್ಳಿ. ಇದರಿಂದ ನಿಮ್ಮ ಮುಂದಿನ ಬದುಕಿನಲ್ಲಿ ಎಡವದೆ ಇರಲು ಸಾಧ್ಯವಾಗಬಹುದು.

ಬದುಕು ಮುಂದುರೆಸಲು ಪ್ಲಾನ್ ಮಾಡಿ: ಸೋತ ನಂತರ ಮುಂದಿನ ಬದುಕನ್ನು ಕೈಚೆಲ್ಲಬಾರದು. ಮುಂದಿನ ದಿನಗಳಲ್ಲಿ ನೀವು ಆಡಬೇಕಿರುವ ಕಾರ್ಯ ಹಾಗೂ ಆ ವೇಳೆ ಸಂಭವಿಸುವ ಕಷ್ಟಗಳನ್ನು ಹೇಗೆ ನಿಭಾಯಿಸಯಿಸುವ ಕುರಿತು ಚಿಂನೆ ಮಾಡಿ.

ಸೋಲನ್ನು ಎದುರಿಸಿ ನಿಲ್ಲಿ: ನೀವು ಸೋಲನ್ನು ತಪ್ಪಿಸಿಕೊಂಡು ಹೋಗುತ್ತಿದ್ದರೆ ಮುಂದಿನ ದಿನಗಳಲ್ಲಿ ಸೋಲು ನಿಮಗೆ ಬಂದರೆ ಅದನ್ನು ಎದುರಿಸುವ ಸಾಮರ್ಥ್ಯ ಇರುವುದಿಲ್ಲ. ಆದ್ದರಿಂದ ನಿಮ್ಮ ಸೌಕರ್ಯ ಜೀವನದಿಂದ ಹೊರಗೆ ಬಂದು ಜೀವನ ನಡೆಸಿ. ನೀವು ಸೋತ ವಿಷಯ ಅಥವಾ ನೀವು ತಿರ್ಸ್ಕರಿಸಲ್ಪಟ್ಟ ಕೆಲಸಗಳಲ್ಲಿ ಯಶಸ್ಸು ಸಾಧಿಸಲು ಪ್ರಯತ್ನಿಸಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss