Saturday, July 2, 2022

Latest Posts

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಮದುಮಗನಂತೆ ಶೃಂಗಾರಗೊಂಡ ಶ್ವಾನ!

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಸಾಮಾಜಿಕ ಜಾಲತಾಣದ ಇಂದಿನ ಸ್ಥಿತಿಗತಿಯಲ್ಲಿ ಮದುವೆ ಪ್ರಪೋಸ್​ಗಳನ್ನೂ ಆನ್​ಲೈನ್​ನಲ್ಲೇ ಹುಡುಕೋದು ಸಾಮಾನ್ಯ ಆಗಿದೆ. ಅದೇ ರೀತಿ ಕೇರಳದ ವ್ಯಕ್ತಿಯೊಬ್ಬರು ತಮ್ಮ ನಾಯಿಗೆ ಮದುಮಗನಂತೆ ಅಲಂಕಾರ ಮಾಡಿ ಸೋಶಿಯಲ್​ ಮೀಡಿಯಾದಲ್ಲಿ ಫೋಟೋ ಶೇರ್​ ಮಾಡುವ ಮೂಲಕ ವಧು ಅನ್ವೇಷಣೆ ಮಾಡ್ತಿದ್ದಾರೆ.
ಕೇರಳದ ಸಾಂಪ್ರದಾಯಿಕ ಉಡುಗೆ ಕಸವು ಮುಂಡು ಹಾಗೂ ಗುಲಾಬಿ ಬಣ್ಣದ ಶರ್ಟ್​ ಧರಿಸಿರುವ ಪಗ್​ ಜಾತಿಯ ನಾಯಿ ಇದಾಗಿದೆ.
ಈ ಫೋಟೋ ಶೇರ್ ಮಾಡಿರುವ ನಾಯಿ ಮಾಲೀಕರು, ನಮ್ಮ ಹ್ಯಾಂಡ್​ಸಮ್​ ಮಲಯಾಳಿ ಹುಡುಗನಿಗೆ ಸುಂದರ ಹುಡುಗಿಯನ್ನ ಹುಡುಕುತ್ತಿದ್ದೇವೆ ಎಂದು ಪೋಸ್ಟ್ ಹಾಕಿದ್ದಾರೆ.
ಫೇಸ್​​ಬುಕ್​​ನಲ್ಲಿ ಈ ಫೋಟೋ ಇದೀಗ ಸಿಕ್ಕಾಪಟ್ಟೆ ವೈರಲ್​ ಆಗಿದ್ದು , ಇದಾದ ಬಳಿಕ ನಾಯಿಯ ಫೋಟೋವನ್ನು ಟ್ವಿಟರ್​ನಲ್ಲೂ ಶೇರ್​ ಮಾಡಿದ ನೆಟ್ಟಿಗರೊಬ್ಬರು ಇದನ್ನೆಲ್ಲ ನೋಡೋಕೆ ಅಂತಾನೇ ನಾನು ಫೇಸ್​ಬುಕ್​ನಲ್ಲಿ ಇದ್ದೇನೆ ಎಂದು ಬರೆದುಕೊಂಡಿದ್ದಾರೆ.
ಈ ಶ್ವಾನದ ಫೋಟೋವಂತೂ ಟ್ರೋಲಿಗರ ಪಾಲಿಗೆ ಬಾಡೂಟವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss