Wednesday, August 10, 2022

Latest Posts

ಸೌದಿ ಅರೇಬಿಯಾ: ಅಂತ್ಯಗೊಂಡಿತು ಕಳೆದ ಮೂರು ತಿಂಗಳಿಂದ ಹೇರಲಾಗಿದ್ದ ಲಾಕ್ ಡೌನ್!

ಸೌದಿ ಅರೇಬಿಯಾ: ಕೊರೋನಾ ಮಹಾಮಾರಿ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳಿಂದ ಹೇರಲಾಗಿದ್ದ ಲಾಕ್ ಡೌನ್ ಅನ್ನು ಸೌದಿ ಸರಕಾರ ಭಾನುವಾರ (ಜೂ. 21) ಕೊನೆಗೊಳಿಸಿದೆ.
ಸೌದಿ ರಾಷ್ಟ್ರದಲ್ಲಿ ಸ್ಥಳೀಯ ಕಾಲಮಾನ ಬೆಳಗ್ಗೆ 6 ಗಂಟೆಯಿಂದ ಲಾಕ್ ಡೌನ್ ನಿರ್ಬಂಧ ಸಂಪೂರ್ಣವಾಗಿ ತೆರವುಗೊಂಡಿದ್ದು, ಆದರೆ ಕೆಲವೊಂದು ನಿಯಮ ಪಾಲಿಸುವಂತೆ ಸರಕಾರ ಸೂಚಿಸಿದೆ. ಅದರಂತೆ ಆದರೆ ಧಾರ್ಮಿಕ ಉದ್ದೇಶಗಳಿಗಾಗಿ ಪ್ರವಾಸ ಬರುವವರು, ಅಂತರರಾಷ್ಟ್ರೀಯ ಪ್ರವಾಸಿಗರು ಮತ್ತು ಸಾಮಾಜಿಕ ಕಾರ್ಯಕ್ರಮಗಳಿಗೆ 50ಕ್ಕೂ ಹೆಚ್ಚು ಜನರು ಒಂದೆಡೆ ಸೇರುವಂತಿಲ್ಲ ಎಂಬ ನಿಯಮ ಮುಂದುವರಿದಿದೆ.
ಕೊರೊನಾ ಹರಡುವುದನ್ನು ತಡೆಯುವ ಉದ್ದೇಶದಿಂದ ಮಾರ್ಚ್ ನಲ್ಲಿ ಸೌದಿ ಅರೇಬಿಯಾ ಕಠಿಣ ನಿರ್ಬಂಧಗಳನ್ನು ಹೇರಿತ್ತು. ಕೆಲವು ಪಟ್ಟಣ ಹಾಗೂ ನಗರಗಳಲ್ಲಿ ಇಪ್ಪತ್ನಾಲ್ಕು ಗಂಟೆಗಳ ಕರ್ಫ್ಯೂ ಹೇರಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss