ಕುಶಾಲನಗರ: ಕೂಡಿಗೆ- ಕುಶಾಲನಗರ ಹೆದ್ದಾರಿಯಲ್ಲಿನ ಅಪಘಾತದ ಸ್ಧಳವನ್ನು ಗುರುತಿಸಿ ಪೋಲಿಸ್ ಇಲಾಖೆ ಸೂಚನೆ ಮೇರೆಗೆ ಲೋಕೋಪಯೋಗಿ ಇಲಾಖೆಯ ವತಿಯಿಂದ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಾರಂಭಿಸಲಾಗಿತ್ತು.
ಆದರೆ ಕೊರೋನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಕೆಲವು ತಿಂಗಳುಗಳಿಂದ ಕೆಲಸ ಸ್ಥಗಿತಗೊಂಡಿತ್ತು. ಇದೀಗ ಲಾಕ್ಡೌನ್ ಸಡಿಲಗೊಂಡ ಮತ್ತು ರಸ್ತೆ ಕಾಮಗಾರಿಗೆ ಬೇಕಾಗುವ ಕಚ್ಚಾ ವಸ್ತುಗಳು ಸಂಗ್ರಹವಾಗಿರುವುದರಿಂದ ಗುತ್ತಿಗೆದಾರರು ಕೂಡಿಗೆಯಿಂದ ಕುಶಾಲನಗರದವರೆಗಿನ ರಸ್ತೆ ಕಾಮಗಾರಿಗೆ ಮರು ಚಾಲನೆ ನೀಡಿದ್ದಾರೆ.