Thursday, June 30, 2022

Latest Posts

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಕೇಸರಿ ಪಡೆ ಅಧಿಕಾರಕ್ಕೆ ಪಣ: ಡಿಸಿಎಂ ಸವದಿ

ಹೊಸ ದಿಗಂತ ವರದಿ, ಯಾದಗಿರಿ:

ಮುಂಬರುವ ಸ್ಥಳೀಯ ಗ್ರಾಮ ಪಂಚಾಯತಗಳಲ್ಲಿ ಹಳ್ಳಿಯಲ್ಲಿರುವ ಪ್ರಮಾಣಿಕ ಬಿಜೆಪಿ ಕಾರ್ಯಕರ್ತನನ್ನು ಗುರುತಿಸಿ ಅರಲ್ಲಿ ನಾಯಕತ್ವದ ಹೊಣೆಗಾರಿಕೆ ಸಜ್ಜುಗೊಳಿಸಲಾಗುತಿದೆ ಎಂದು ರಾಜ್ಯದ ಉಪ ಮುಖ್ಯಮಂತ್ರಿ. ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.
ಅವರು ಜಿಲ್ಲೆಯ ಶಹಪೂರ ಪಟ್ಟಣದಲ್ಲಿ ಹಮ್ಮಿಕೊಂಡ ಜಿಲ್ಲಾ ಮಟ್ಟದ ಗ್ರ‍್ರಾಮ ಸ್ವರಾಜ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಯಾದಗಿರಿ ಜಿಲ್ಲೆಯಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳು ಸೇರಿದಂತೆ, ಎಲ್ಲಾ ಗ್ರಾ,ಪಂಗಳಲ್ಲಿ ಬಿಜೆಪಿ ಬೆಂಬಲಿತ ಕೇಸರಿ ಪಡೆ ಅಧಿಕಾರಕ್ಕೆ ತರುವ ಪ್ರಯತ್ನಕ್ಕೆ ಪಣಕ್ಕೊಡ್ಡಬೇಕು ಎಂದು ಕಾರ್ಯಕರ್ತರಿಗೆ ಕರೆ ನಿಡಿದರು.
74 ವರ್ಷಗಳ ಇತಿಹಾಸದಲ್ಲಿ ಕಾರ್ಯಕರ್ತರನ್ನು ಗೌರವಿಸುವ ಮನೋಭಾವನೆಗಳು ತೋರದೆ ನಾಯಕನನ್ನೆ ಗೌರವಿಸುವ ಜಾಯಮಾನಕ್ಕೆ ಸೀಮಿತಗೊಂಡಿತ್ತು ಎಂದು ಪರೋಕ್ಷವಾಗಿ ಕಾಂಗ್ರೆಸ್ ಪಕ್ಷವನ್ನು ತೆಗಳಿದ ಅವರು, ಬಿಜೆಪಿ ಪಕ್ಷ ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿೆ ನಾಯಕತ್ವ ನೀಡುವುದರ ಮುಖಾಂತರ ಅಧಿಕಾರ ನೀಡಿದ್ದು ಐತಿಹಾಸಿಕ ಸಂಗತಿ ಎಂದ ಹೇಳಿದರು.
ರಾಜ್ಯದ, 31 ಜಿಲ್ಲೆಗಳಲ್ಲಿ 62 ಕಾರ್ಯಕ್ರಮಗಳು, 11 ಸಮಾವೇಶಗಳಿಂದ ಬಿಜೆಪಿ ಕಾರ್ಯಕರ್ತರಲ್ಲಿ ಹುಮ್ಮಸ್ಸು ಉತ್ಸಾಹ ಹೆಚ್ಚುತ್ತಿದೆ. ಸಕ್ರೀಯ ರಾಜಕಾರಣದಲ್ಲಿ ಜಾತಿ ಮರುಕಳಿಸಿದೆ. ವ್ಯಕ್ತಿ, ಪಕ್ಷ ನಿಷ್ಟ್ಟೆಯತ್ತ ಗಮನ ಹರಿಸಬೇಕು ಎಂದು ಮಾರ್ಮಿಕವಾಗಿ ಹೇಳಿದರು.
ಸಮಾವೇಶದಲ್ಲಿ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ವಸತಿ ಮಂತ್ರಿ ವಿ. ಸೋಮಣ್ಣನವರು ಮಾತನಾಡಿ, ಗ್ರಾಮ ಪಂಚಾಯತ್ ಚುನಾವಣೆಗಳು. ಪಕ್ಷಾತೀತವಾಗಿ ನೆಡೆಯವುದರಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ನಿಲ್ಲಿಸಿ ಗೆಲ್ಲಿಸಬೇಕು. ಪ್ರಧಾನಿ ಮೋದಿಜೀ, ರಾಜ್ಯಾಧ್ಯಕ್ಷರಾದ ನಳಿನ ಕುಮಾರ ಕಟೀಲರವರ ಮತ್ತು ಬಿಎಸ್,ವೈರವರ ದೂರದೃಷ್ಟಿ ಬಿಜೆಪಿ ಯೋಜನೆಗಳು, ಗ್ರಾಮೀಣ ಜನರ ಸದುಪಯೋಗಕ್ಕೆ ಗ್ರಾಮಸ್ವರಾಜ್ ದಿಕ್ಸೂಚಿಯಾಗಲ್ಲಿದೆ. ಗ್ರಾ,ಪಂ, ಚುನಾವಣೆಯಲ್ಲಿ ಆತ್ಮೀಯತೆ. ಸಾಮರಸ್ಯೆಗಳಿಂದ ಸಹೋದರತೆಗಳನ್ನು, ಬೆಳಸಿಕೊಂಡು ಮುನ್ನೆಡೆಯಬೇಕು. ಪ್ರಮುಖ ವ್ಯಕ್ತಿಗೆ ನಾಯಕತ್ವ ನೀಡಬೇಕು ಎಂದು ಮನವಿ ಮಾಡಿದರು.
ಮಾಜಿ ಶಾಸಕರಾದ, ಗುರು ಪಾಟೀಲರವರು ಮಾತನಾಡಿ ಶೇ.60 ರಷ್ಟು ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿದ್ದಾರೆ. ರಾಜಕೀಯ ಬೂತಮಟ್ಟದ ಕಾರ್ಯಕರ್ತರು ಬಿಜೆಪಿ ಪಕ್ಷದ ಜೀವಾಳವಾಗಿದ್ದು. ಪ್ರಧಾನಿ ಮೋದಜೀಯವರ ಮತ್ತು ಮುಖ್ಯಮಂತ್ರಿ ಬಿಎಸ್,ವೈರವರ ನಿರ್ಧೇಶನಗಳು, ಪಕ್ಷದ ಸಂಘಟನೆಗೆ ಪೂರಕವಾಗಿವೆ. ಸರ್ಕಾರದ ಯೋಜನೆಗಳು ಗ್ರಾಮಿಣ ಜನರಿಗೆ ಮನವರಿಕೆ ಮಾಡುವದರ ಮುಖಾಂತರ, ಜಾಹೃತಿಗೊಳಿಸಬೇಕು ಎಂದರು.
ಅಥಿತಿಗಳಾಗಿ, ಆಗಮಿಸಿದ್ದ ಶಾಸಕರಾದ ಬಿ.ಜಿ ಪಾಟೀಲ್. ಶಶಿಲ ನಮೋಶಿ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವತನಾರಾಯಣ. ಭಗವಂತ ಖೂಭಾ ಯಾದಗಿರಿ ಶಾಸಕರಾದ, ವೆಂಕಟರಡ್ಡಿ ಮುದ್ನಾಳ. ಮಾಜಿ ಮಂತ್ರಿ ಬಾಬುರಾವ್ ಚಿಂಚನ್ಸೂರ. ಮಾತನಾಡಿದರು.
ಸಮಾವೇಶದ ಅಧ್ಯಕ್ಷತೆಯನ್ನು, ಯಾದಗಿರಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ, ಡಾ, ಶರಣಬೂಪಾಲರಡ್ಡಿ ನಾಯಕಲ್. ವಹಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಕಾಡಾ ಅಧ್ಯಕ್ಷರಾದ ಶರಣಪ್ಪ ತಳವಾರ. ಅಮರನಾಥ ಪಾಟೀಲ್. ರಾಜ್ಯ ಬಿಜೆಪಿ ಮಹಿಳಾ ಘಟಕದ ಉಪಾಧ್ಯಕ್ಷೆ ಲಲಿತಾ ಅನÀಪೂರ. ಮಹಿಳಾ ಮೊರ್ಚಾ ರಾಜ್ಯ ಉಪಾಧ್ಯಕ್ಷರಾದ ನಾಗರತ್ನ ಕುಪ್ಪಿ. ಯಾದಗಿರಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಚಂಡ್ರಕಿ. ರಾಜಾ ಹನುಮಪ್ಪನಾಯಕ. ಮಾಜಿ ಎಮ್.ಎಲ್,.ಸಿ, ಅಮಾತೆಪ್ಪ ಸಾಹು, ಮುಖಂಡರಾದ ಮಲ್ಲಣ್ಣ ಮಡ್ಡಿ ಸಾಹು.ರಾಜ್ಯ ಬಿಜೆಪಿ ರೈತ ಮೊರ್ಚಾ ಪ್ರಧಾನ ಕಾರ್ಯದರ್ಶಿಗಳಾದ, ಚಂದ್ರಶೇಖರಗೌಡ ಮಾಗನೂರ ಸೇರಿದಂತೆ ಅನೆಕ ಪದಾಧಿಕಾರಿಗಳು ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss