Wednesday, August 17, 2022

Latest Posts

‘ಸ್ನೇಹ’ವೆಂಬ ಸಂಪತ್ತನ್ನು ಹೇಗೆ ಜೋಪಾನ ಮಾಡೋದು? ಹಾಗಿದ್ದರೆ ಈ ವಿಚಾರಗಳನ್ನು ನೆನಪಿಡಿ

ಮನುಷ್ಯನ ಜೀವನದಲ್ಲಿ ಅತಿ ಸುಂದರ ಸಂಬಂಧವೆಂದರೆ ಸ್ನೇಹ. ಸ್ನೇಹ ಎಂದರೆ ಅಕ್ಕರೆ, ಪ್ರೀತಿ, ಜಗಳ, ಖುಷಿ, ನಗು, ಅಳು ಈ ಎಲ್ಲಾ ಅಂಶಗಳನ್ನೊಳಗೊಂಡು ಒಬ್ಬ ವ್ಯಕ್ತಿಯನ್ನು ಅವನಿರುವಂತೆಯೇ ಸ್ವೀಕರಿಸುವುದೇ ಸ್ನೇಹ. ಈ ಸ್ನೇಹ ಸಂಬಂಧಕ್ಕೆ ಬೆಲೆಯ ಕಟ್ಟಲಾಗದಷ್ಟು ಪ್ರೀತಿ, ವಾತ್ಸಲ್ಯ.

ಈ ಭಾವನೆಗಳಿಗೆ ಯಾವುದೇ ಮಾನದಂಡಗಳ ಅಗತ್ಯವಿರುವುದಿಲ್ಲ. ಯಾವ ಕ್ಷಣದಲ್ಲಿಯಾದರೂ ಎಲ್ಲಿದ್ದರೂ ನಮಗೆ ಬೆನ್ನೆಲುಬಾಗಿ ಇರುವುದು ಸ್ನೇಹ. ನಮ್ಮ ಬದುಕಿನಲ್ಲಿ ಕೆಲವು ಸಮಯದಲ್ಲಿ ಯಾರು ಇಲ್ಲದೆ ನಾವೊಬ್ಬರೆ ಎಲ್ಲವನ್ನೂ ಮಾಡಬೇಕಾಗಬಹುದು ಆ ಸಮಯದಲ್ಲಿ ಸುಮ್ಮನೆ ಕೊರಗದೆ ಮತ್ತೊಬ್ಬರ ನೋವಿಗೆ, ಕಷ್ಟ, ಸುಖಗಳಿಗೆ ನಾವೆಷ್ಟು ಜೊತೆಯಾಗಿದ್ದೆವು ಎಂಬುದನ್ನು ನೆನೆಯಿರಿ.

ಸ್ನೇಹವೆಂಬ ಈ ಆತ್ಮೀಯ ಬಾಂಧವ್ಯಗಳು ಕೆಲವು ಕಾರಣಗಳಿಗೆ ದೂರಾಗುವವರೂ ಹೆಚ್ಚಾಗಿದ್ದಾರೆ. ಆದರೆ ನೆನಪಿಡಿ, ನಾವೆಷ್ಟೆ ಶ್ರೀಮಂತರಾಗಲಿ ಅಥವಾ ಕಡು ಬಡತನದಲ್ಲಿರಲಿ. ನಮ್ಮ ಮನಸ್ಸು ಯಾವಾಗ ಮತ್ತೊಬ್ಬರ ನೋವಿಗೆ ಮರುಗುವುದೋ, ಮತ್ತೊಬ್ಬರ ಖುಷಿಗೆ ಸ್ಪಂದಿಸುವುದೋ ಅಂತಹ ನಿಷ್ಕಲ್ಮಶ ಮನಸ್ಸಿಗೆ ಸ್ನೇಹವೆಂದ ಎರಡಕ್ಷರದ ಸಂಬಂಧಕ್ಕೆ ಮೀರಿದ ಬಂಧ ಸಿಗಲಿದೆ.

ಆದರೆ ಈ ಸಂಬಂಧಗಳನ್ನು ನಾವು ಸಾಕಷ್ಟು ಬಾರಿ ಕ್ಷುಲ್ಲಕ ಕಾರಣಗಳಿಗೆ ಕಳೆದುಕೊಂಡಿರುತ್ತೇವೆ. ಆದರೆ ಆ ರೀತಿ ನಾವು ನಮ್ಮ ಸ್ನೇಹಿತರನ್ನು ಕಳೆದುಕೊಳ್ಳಬಾರದೆಂದರೆ ಈ ವಿಚಾರಗಳನ್ನು ನೆನಪಿಡಿ.

ಹಣದ ವ್ಯವಹಾರ ಬೇಡ: ಹಣದ ತೊಂದರೆಯೋ ವ್ಯಾಮೋಹವೋ, ಆದರೆ ಹಣ ಒಂದು ಪವಿತ್ರ ಸ್ನೇಹವನ್ನು ಹಾಳು ಮಾಡುತ್ತದೆ. ನಾವು ಎಷ್ಟು ಜಾಗೃತರಾಗಿದ್ದರೂ ಕಡಿಮೆಯೇ. ಆದಷ್ಟು ಸ್ನೇಹಿತರ ಮಧ್ಯೆ ಯಾವುದೇ ಹಣದ ವ್ಯವಹಾರ ಬೇಡ. ಬೈ ಚಾನ್ಸ್ ಮಾಡಿದ್ದರು ಆದಷ್ಟು ಬೇಗ ಹಣವನ್ನು ಹಿಂತಿರುಗಿಸಿ ಬಿಡಿ.

ವೃತ್ತಿಯೇ ಬೇರೆ, ಸ್ನೇಹವೇ ಬೇರೆ: ಹೌದು ನಮ್ಮ ವೃತ್ತಿ ಜೀವನದಲ್ಲಿ ಸಿಗುವ ಕೆಲವು ಅಪರೂಪದ ಸ್ನೇಹ ಬಂಧಗಳನ್ನು ಸಂಸ್ಥೆಯ ಕಾರ್ಯಗಳ ಕಿರಿಕಿರಿಯಿಂದ ನಿಮ್ಮ ವೈಯಕ್ತಿಕ ಸಂಬಂಧಗಳು ಬೇರೆ ಅದನ್ನು ಅರಿತು ಬದುಕುವುದನ್ನು ಕಲಿಯಬೇಕು.

ಮೆಸೇಜ್ ಮಾಡುತ್ತಿರಿ:  ನಿಮ್ಮ ಸ್ನೇಹಿತರಿಗೆ ಆಗಾಗ ಮೆಸೇಜ್ ಅಥವಾ ಕಾಲ್ ಮಾಡುತ್ತಿರಿ. ಇದರಿಂದ ನಿಮ್ಮ ಸ್ನೇಹ ಗಟ್ಟಿಯಾಗಿರುತ್ತದೆ.

ಕಷ್ಟದಲ್ಲಿ ಜೊತೆ ನಿಲ್ಲಿ: ಸ್ನೇಹ ಅಮೂಲ್ಯ ಅನ್ನುವುದು ಇದೇಕಾರಣಕ್ಕೆ ಅಲ್ವಾ? ನಮ್ಮ ಜೀವನದಲ್ಲಿ ಏನೇ ಆಗುತ್ತಿದ್ದರೂ ಸಹಿಸಿಕೊಳ್ಳುವ ಶಕ್ತಿ ಇರುತ್ತದೆ ಆದರೆ ನಮ್ಮ ಸ್ನೇಹಿತರಿಗೆ ಒಂದಿಷ್ಟು ನೋವಾದರೂ, ಜೊತೆಯಾಗಿ ನಿಲ್ಲುವುದೇ ಸ್ನೇಹ.

ಬರ್ತ್ ಡೇ ವಿಷ್ ಮಾಡೋದು ಮರಿಬೇಡಿ:  ಸ್ನೇಹಕ್ಕೆ ಮತ್ತೊಂದು ಹೆಸರು ಪ್ರೀತಿ. ನಾವು ಪ್ರೀತಿಸುವ ಜೀವ ನಮ್ಮ ಬರ್ತ್ ಡೇ ಗೆ ವಿಶ್ ಮಾಡದೇ ಇರುವುದು ಸಂಬಂಧಕ್ಕೆ ಅದೊಂದು ದೊಡ್ಡ ಹೊಡೆದ ನೀಡುವುದು.

ನಂಬಿಕೆ ಇರಲಿ: ಸ್ನೇಹಿತರ ನಡುವೆ ನಂಬಿಕೆ ಇರಲಿ. ನಿಮ್ಮ ಸೀಕ್ರೇಟ್ ಗಳನ್ನು ಯಾರೊಬ್ಬರಿಗೂ ಹೇಳಿಕೊಳ್ಳಬೇಡಿ.

ಮುಚ್ಚುಮರೆ ಬೇಡ: ನಿಮ್ಮ ನಡುವೆ ಯಾವುದೇ ರೀತಿಯ ಮುಚ್ಚು ಮರೆ ಇರಿಸಬೇಡಿ. ಮುಂದಿನ ದಿನಗಳಲ್ಲಿ ಮುಚ್ಚಿಟ್ಟ ವಿಚಾರಗಳು ಹೊರಬಂದಾಗ ಆಗುವ ಅನಾಹುತಗಳಿಗೆ ನೀವು ಎಡೆ ಮಾಡಿಕೊಡಬೇಡಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!