ಸ್ಪೀಡ್ ಚೆಸ್ ಚಾಂಪಿಯನ್‌ಶಿಪ್‌| ಸೆಮಿ ಪೈನಲ್ಸ್ ಪ್ರವೇಶಿಸಿದ Young Indian Grand Master ಆರ್. ವೈಶಾಲಿ

0
20

ಹೊಸದಿಲ್ಲಿ: ಸ್ಪೀಡ್ ಚೆಸ್ ಚಾಂಪಿಯನ್‌ಶಿಪ್‌ನ ಮೊದಲ ಹಂತದಲ್ಲಿ ಯುವ ವಿಶ್ವ ಗ್ರ್ಯಾಂಡ್ ಮಾಸ್ಟರ್ ಆರ್ ವೈಶಾಲಿ ಮಾಜಿ ವಿಶ್ವ ಚಾಂಪಿಯನ್ ಆಂಟೊನೆಟಾ ಸ್ಟೆಫನೋವಾ ವಿರುದ್ಧ ಜಯಗಳಿಸಿ ಸೆಮಿ ಪೈನಲ್ಸ್ ಪ್ರವೇಶಿಸಲಿದ್ದಾರೆ.

ಚೆನ್ನೈ ಮೂಲದ ವೈಶಾಲಿ ಸೆಮಿ ಫೈನಲ್‌ ನಲ್ಲಿ ಮಂಗೋಲಿಯಾದ ಇಂಟರ್ನ್ಯಾಷನಲ್ ಮಾಸ್ಟರ್ ಮುಂಖುಲ್ ತುರ್ಮುಂಖ್ ವಿರುದ್ಧ ಸೆಣಸಲಿದ್ದಾರೆ. ಅರ್ಹತಾ ಹಂತಗಳಲ್ಲಿ ಪ್ರಬಲ ಆಟಗಾರರಾದ ವ್ಯಾಲೆಂಟಿನಾ ಗುನಿನಾ ಮತ್ತು ಅಲೀನಾ ಕಾಶ್ಲಿನ್ಸ್ಕಾಯಾ ಅವರನ್ನು ಸೋಲಿಸಿದ ವೈಶಾಲಿ ಬುಧವಾರ ತಡರಾತ್ರಿ ಬಲ್ಗೇರಿಯನ್ ಎದುರಾಳಿಯ ವಿರುದ್ಧ 6-5 ಅಂತರದ ಜಯ ದಾಖಲಿಸಿದರು.

ವೈಶಾಲಿ ಅದನ್ನು ಸ್ಟೆಫನೋವಾ ವಿರುದ್ಧ ಜಯಗಳಿಸಿ ಸಂತೋಷಪಟ್ಟರು. “ಹೌದು, ಮಾಜಿ ವಿಶ್ವ ಚಾಂಪಿಯನ್ ವಿರುದ್ಧ ಆಡುವುದು ಮತ್ತು ಅವರನ್ನು ಸೋಲಿಸಿದ್ದು ಖುಷಿಯಾಗಿದೆ” ಎಂದು ಅವರು ತಿಳಿಸಿದರು.

“ನಾನು ಒಂದು ಗಂಟೆಯ ನಂತರ 5.5-2.5 ರೊಂದಿಗೆ ಪಂದ್ಯವನ್ನು ಮುನ್ನಡೆಸುತ್ತಿದ್ದೆ, ನಂತರ ಬುಲೆಟ್ ವಿಭಾಗದಲ್ಲಿ ಆಡುತ್ತಿದ್ದೆವು ಆದರೆ, ಇಂಟರ್ನೆಟ್ ಸಂಪರ್ಕ ಕಡಿತಗೊಂಡಿದ್ದ ಹಿನ್ನಲೆ ನಾನು ಸಮಯಕ್ಕೆ ಸಮಾನ ಸ್ಥಾನದಲ್ಲಿ ಸೋತಿದ್ದೇನೆ” ಎಂದು ಅವರು ಹೇಳಿದರು.

LEAVE A REPLY

Please enter your comment!
Please enter your name here