ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಬೃಹತ್ ಡ್ರಗ್ಸ್ ಜಾಲವನ್ನ ಭೇದಿಸಿದ್ದು, ಡ್ರಗ್ಸ್ ಜಾಲದಲ್ಲಿ ಸ್ಯಾಂಡಲ್ವುಡ್ ನಟ, ನಟಿಯರು ಸೇರಿದಂತೆ ಸಂಗೀತ ನಿರ್ದೇಶಕರು, ಗಾಯಕರ ಹೆಸ್ರುಗಳು ಕೇಳಿ ಬರ್ತಿವೆ.
ಜತೆಗೆ ಕನ್ನಡ ಚಿತ್ರರಂಗದ ಯುವ ನಟನ ಸಾವಿನ ಬಗ್ಗೆಯೂ ಒಂದು ಗಂಭೀರ ಪ್ರಶ್ನೆ ಎತ್ತಿದ್ದಾರೆ.
“ಇತ್ತೀಚೆಗೆ ಯುವ ನಟ ತೀರಿಹೋದಾಗ ಇಡೀ ರಾಜ್ಯಕ್ಕೆ ನೋವಾಗಿತ್ತು. ಆದ್ರೆ, ಮೃತದೇಹದ ಯಾವುದೇ ವೈದ್ಯಕೀಯ ಪರೀಕ್ಷೆಯನ್ನೂ ನಡೆಸಲಿಲ್ಲ. ಯಾಕಂದ್ರೆ, ಮರಣೋತ್ತರ ಪರೀಕ್ಷೆ ನಡೆಸದಂತೆ ರಾಜಕೀಯ ಒತ್ತಡ ಹೇರಲಾಯಿತು. ಈ ಬಗ್ಗೆ ಒಂದೇ ಒಂದು ತನಿಖೆಯೂ ನಡೆಯಲಿಲ್ಲ ಯಾಕೆ?” ಹಾಗಂತ, ನನಗೆ ಆ ನಟನ ಕುಟುಂಬಕ್ಕೆ ನೋವು ಮಾಡುವ ಉದ್ದೇಶವಿಲ್ಲ. ಆದರೆ, ಮರಣೋತ್ತರ ಪರೀಕ್ಷೆ ಏಕೆ ನಡೆಸಿಲ್ಲವೆಂಬುದೇ ನನ್ನ ಪ್ರಶ್ನೆ ಎಂದಿದ್ದಾರೆ” ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಪ್ರಶ್ನಿಸಿದ್ದಾರೆ.
ಕೆಲವು ವರ್ಷಗಳ ಹಿಂದೆ ಬೆಂಗಳೂರಿನ ಸೌತ್ ಎಂಡ್ ಸರ್ಕಲ್ ಬಳಿ ಕಾರು ಅಪಘಾತ ಆದಾಗ ಅದರಲ್ಲಿ ಮಾದಕ ವಸ್ತು ಸಿಕ್ತು ಎನ್ನಲಾಗಿತ್ತು. ಆದರೆ ನಂತರ ಅದರ ತನಿಖೆ ಏನಾಯಿತು? ಅದರಲ್ಲಿ ಕೆಲವರ ಹೆಸರು ಕೇಳಿಬಂದರೂ ಯಾಕೆ ಶಿಕ್ಷೆ ಆಗಲಿಲ್ಲ” ಎಂದು ಪ್ರಶ್ನಿಸಿದ್ದಾರೆ.
ಮಾಧ್ಯಮಗಳ ಎದುರು ಕನ್ನಡ ಚಿತ್ರರಂಗದಲ್ಲಿ ಮಾದಕ ವಸ್ತುಗಳ ಬಳಕೆಯಾಗುತ್ತಿದೆ ಎಂದು ಹೇಳಿರುವ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರಿಗೆ ಮಾಹಿತಿ ನೀಡುವಂತೆ ಸಿಸಿಬಿ ನೋಟಿಸ್ ನೀಡಿದೆ.