Sunday, August 14, 2022

Latest Posts

ಸ್ಫೋಟಕ ಸಾಮಗ್ರಿಗಳ ಅಕ್ರಮ ಸಾಗಾಟ: ಜಾರ್ಖಂಡ್ ಮೂಲದ ವ್ಯಕ್ತಿ ಬಂಧನ

ಹೊಸ ದಿಗಂತ ವರದಿ, ಹಾವೇರಿ:

ಅಕ್ರಮವಾಗಿ ಸ್ಪೋಟಕ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಜಾರ್ಖಂಡ ಮೂಲದ ೨೪ ವರ್ಷದ ಅಜಯಕುಮಾರ ಯಾದವ ಎಂಬಾತನನ್ನು ಬಂಧಿಸಿ ನ್ಯಾಯಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಶುಕ್ರವಾರ ಮಧ್ಯಾಹ್ನ ಬ್ಯಾಡಗಿ ಠಾಣಾ ವ್ಯಾಪ್ತಿಯ ಛತ್ರದಿಂದ ಆಲಗೇರಿ ಕಡೆಗೆ ಹೋಗುವ ರಸ್ತೆಯಲ್ಲಿ ಆಂತರಿಕ ಭದ್ರತಾ ವಿಭಾಗದ ಹಾವೇರಿ-ಗದಗ ಘಟಕದ ಅಧಿಕಾರಿ ಹಾಗೂ ಸಿಬ್ಬಂದಿಗಳು ಆರೋಪಿಯು ಒಂದು ರಟ್ಟಿನ ಬಾಕ್ಸ್‌ನಲ್ಲಿ ೧೮೦ ಇxಠಿಟosive (ಅಐಂSS-೨) ಖಿubes ಮತ್ತು ೪೫ ಇಆ (ಇxಠಿಟosive ಆeviಛಿe) Wiಡಿes ಕಾನೂನು ಬಾಹೀರವಾಗಿ ಹಿರೋ ಹೊಂಡಾ ದ್ವಿಚಕ್ರ ವಾಹನದಲ್ಲಿ ಸಾಗಿಸುತ್ತಿದ್ದ ಸಂದರ್ಭದಲ್ಲಿ ಸಂಶಯಗೊಂಡು ಸದರಿ ವ್ಯಕ್ತಿಯನ್ನು ತಡೆದು ನಿಲ್ಲಿಸಿ ವಿಚಾರಿಸಲಾಗಿ ಜಾರ್ಖಂಡ ರಾಜ್ಯದ ಕೊಡೆರ್ಮಾ ತಾಲೂಕಿನ ಚೋಪ್ನಾದಿ ವಾಸಿಯಾಗಿದ್ದು, ವೆಂಕಟಾಪುರ ಗುತ್ತಿದಾರ ಕುಮಾರ ಕಬ್ಬೂರ ಅವರ ಕ್ರಷರ್ ಉಸ್ತುವಾರಿ ನೋಡಿಕೊಳ್ಳುವ ರಾಣೇಬೆನ್ನೂರಿನ ಮಾಲತೇಶ ಎಂಬುವವರಿಂದ ಪಡೆದುಕೊಂಡಿದ್ದು, ಕ್ವಾರಿಗಳಲ್ಲಿ ಸ್ಪೋಟಕಗಳನ್ನು ಬಳಸಲು ತೆಗೆದುಕೊಂಡು ಹೋಗುತ್ತಿದ್ದಾಗಿ ತಿಳಿಸಿದ್ದಾನೆ.
ಸ್ಥಳದಲ್ಲಿ ದೊರೆತ ಸ್ಪೋಟಕ ಸಾಮಗ್ರಿಗಳನ್ನು ಹಾಗೂ ಸಾಗಾಣಿಕೆಗೆ ಬಳಸಿದ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ದಾಳಿಯಲ್ಲಿ ಆಂತರಿಕ ಭದ್ರತಾ ವಿಭಾಗದ ಹಾವೇರಿ-ಗದಗ ಘಟಕದ ಪೊಲೀಸ್ ನಿರೀಕ್ಷಕ ಈರಯ್ಯಾ ಮಠಪತಿ, ಸಿಬ್ಬಂದಿಗಳಾದ ಅನಿಲ್‌ಕುಮಾರ ಬಿಜಾಪುರ, ಎಂ.ಎಚ್.ಗುಡಗೂರ, ಸುನಿಲ್ ಹುಚ್ಚಣ್ಣವರ, ಶಿವಮೂರ್ತಿ ಕುರಿ, ದುರ್ಗಪ್ಪ ಕೊಡ್ಲೇರ ಭಾಗವಹಿಸಿದ್ದರು.
ಹಿರಿಯ ಅಧಿಕಾರಿಗಳು ಈ ಕಾರ್ಯವನ್ನು ಶ್ಲಾಘಿಸಿದ್ದಾರೆ ಎಂದು ಆಂತರಿಕ ಭದ್ರತಾ ವಿಭಾಗದ ಉತ್ತರವಲಯದ ಉಸ್ತುವಾರಿ ಅಧಿಕಾರಿ ಡಿ.ವೈ.ಎಸ್.ಪಿ.ಅನಿಲ್‌ಕುಮಾರ ಅವರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss