Thursday, August 11, 2022

Latest Posts

ಸ್ಯಾಂಡಲ್ವುಡ್ ನ ಮತ್ತಿಬ್ಬರಿಗೆ ಸಿಸಿಬಿ ಅಧಿಕಾರಿಗಳಿಂದ ನೋಟಿಸ್. ಅವರು ಯಾರು ಗೊತ್ತಾ?

ಸ್ಯಾಂಡಲ್‌ವುಡ್‌ನಲ್ಲಿ  ಡ್ರಗ್ಸ್  ನಂಟಿನ  ಪ್ರಕರಣಕ್ಕೆ  ಸಂಬಂಧಿಸಿದಂತೆ ಮತ್ತಿಬ್ಬರಿಗೆ  ಸಿಸಿಬಿ  ಅಧಿಕಾರಿಗಳು  ನೋಟಿಸ್ ನೀಡಿದ್ದಾರೆ.  ಈಗಾಗಲೇ  ನಟಿ  ರಾಗಿಣಿ ಹಾಗೂ  ಸಂಜನಾ

ಬಂಧನಕ್ಕೊಳಗಾಗಿದ್ದು,  ಸದ್ಯ  ಪರಪ್ಪನ  ಅಗ್ರಹಾರದಲ್ಲಿ ಇದ್ದಾರೆ.

ಅಷ್ಟೇ ಅಲ್ಲದೇ  ನಟ ದಿಗಂತ್ ಹಾಗೂ ನಟಿ ಐಂದ್ರಿತಾ ಈಗಾಗಲೇ ಸಿಸಿಬಿ ಯಿಂದ ವಿಚಾರಣೆ ಎದುರಿಸಿದ್ದಾರೆ. ಇದೀಗ ಮತ್ತೆ ಇಬ್ಬರು ನಟರಿಗೆ ಸಿಸಿಬಿ ಬುಲಾವ್ ಕಳಿಸಿದೆ. ನಟ, ನಿರೂಪಕ ಅಕುಲ್ ಬಾಲಾಜಿ, ನಟ ಸಂತೋಷ್, ಮಾಜಿ ಶಾಸಕ ಆರ್.ವಿ.ದೇವರಾಜ್ ಪುತ್ರ ಯುವರಾಜ್ ಅವರುಗಳಿಗೆ ಸಿಸಿಬಿ ನೋಟಿಸ್ ಜಾರಿ ಮಾಡಿದೆ.

ತಮಗೆ ಸಿಸಿಬಿ ಯಿಂದ ದೂರವಾಣಿ ಮೂಲಕ ನೋಟಿಸ್ ಬಂದಿರುವುದಾಗಿ ಅಕುಲ್ ಬಾಲಾಜಿ ಹೇಳಿದ್ದಾರೆ. ನಟ ಸಂತೋಷ್ ಸಹ ನೋಟಿಸ್ ಬಂದಿರುವುದನ್ನು ಸ್ಪಷ್ಟಪಡಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss