Monday, August 8, 2022

Latest Posts

‘ಸ್ಯಾಂಡಲ್​ವುಡ್​ನ ಡ್ರಗ್ಸ್ ದಂಧೆ’ ಬಗ್ಗೆ ಹೇಳಿದ್ರು ನಟ ನವೀನ್ ಕೃಷ್ಣ , ಆದಿ ಲೋಕೇಶ್!

ಬೆಂಗಳೂರು: ಗುರುವಾರ ಮಾದಕವಸ್ತು ನಿಯಂತ್ರಣ ಸಂಸ್ಥೆ (ಎನ್​ಸಿಬಿ) ರಾಜ್ಯ ರಾಜಧಾನಿಯಲ್ಲಿ ಬೃಹತ್​​ ಡ್ರಗ್ಸ್​ ಜಾಲವನ್ನ ಭೇದಿಸಿದ್ದು, ಡ್ರಗ್ಸ್​ ಜಾಲದಲ್ಲಿ ಸ್ಯಾಂಡಲ್​ವುಡ್ ನಟ-ನಟಿಯರು ಸೇರಿದಂತೆ ಗಾಯಕ- ಸಂಗೀತ ನಿರ್ದೇಶಕರ ಹೆಸರುಗಳು ಕೇಳಿ ಬರ್ತಿವೆ.

ಸ್ಯಾಂಡಲ್​ವುಡ್​ನ ಡ್ರಗ್ಸ್ ದಂಧೆ ಬಗ್ಗೆ ಇಂದ್ರಜಿತ್ ಆರೋಪದ ಬಳಿಕ ಹಲವು ಜನರು ಹಲವು ವಿಚಾರಗಳನ್ನು ಹೊರಹಾಕುತ್ತಿದ್ದರೆ.
ನಟ ಹಾಗೂ ಸಂಭಾಷಣೆಕಾರ ನವೀನ್ ಕೃಷ್ಣ ಕೂಡ ಈ ಬಗ್ಗೆ ಟ್ವೀಟ್‌ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಕೆಲವೇ ಕೆಲವು ಕಲಾವಿದರು ಮಾತ್ರವಲ್ಲ, ಲಕ್ಷಾಂತರ ಮಂದಿ ಕಲಾವಿದರು, ತಂತ್ರಜ್ಞರು ಕೂಡ ಇದ್ದಾರೆ. ಮಜಾ ಮಾಡಲು ಹಣವಿರುವ ಶ್ರೀಮಂತರು ಒಂದೆಡೆಯಿದ್ರೆ, ದುಡಿದು ಬದುಕಲು ಪರದಾಡುವ ಬಡವರೂ ಇದ್ದಾರೆ. ಆದರೆ, ಎಲ್ಲರೂ ಸ್ಯಾಂಡಲ್​​ವುಡ್​ನ ಭಾಗವೇ ಆಗಿದ್ದಾರೆ ಎಂದಿದ್ದಾರೆ.ನನ್ನ ಉದ್ದೇಶ ಒಂದೇ, ಯಾರು ಈ ಮಾಫಿಯಾದಲ್ಲಿ ಸೇರಿಕೊಂಡಿದ್ದಾರೋ ಅವರ ಹೆಸರುಗಳನ್ನು ಹೇಳಿ. ಅವರನ್ನು ಮಾತ್ರ ಆರೋಪಿತರನ್ನಾಗಿಸಿ ಎಂದಿದ್ದಾರೆ.

ಅದೇ ರೀತಿ ನಟ ಆದಿ ಲೋಕೇಶ್ ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ದಂಧೆ ಬಗ್ಗೆ ಹೊಸ ಬಾಂಬ್ ಸಿಡಿಸಿದ್ದಾರೆ.
ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ದಂಧೆ ಇದೆ.ಯುವ ಸ್ಟಾರ್ ಗಳು ಡ್ರಗ್ಸ್ ದಂಧೆಯಲ್ಲಿದ್ದಾರೆ. ನಾನು ಅವರ ಹೆಸರು ಹೇಳುವುದಿಲ್ಲ. ಡ್ರಗ್ಸ್ ತಗಳೋರನ್ನ ನಾನು ನೋಡಿದ್ದೇನೆ. ಕೆಲವು ನಟರು ಡ್ರಗ್ಸ್ ತೆಗೆದುಕೊಳ್ಳುತ್ತಾರೆ. ಕೆಲವು ನಟರು ಸಣ್ಣ ದಪ್ಪ ಆಗಲು ಸ್ಟಿರಾಯ್ಡ್ ತೆಗೆದುಕೊಳ್ಳುತ್ತಾರೆ. ನಾನು ಅದನ್ನು ನೋಡಿದ್ದೇನೆ ಎಂದು ನಟ ಆದಿ ಲೋಕೇಶ್ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss