Saturday, August 13, 2022

Latest Posts

ಸ್ಯಾಂಡಲ್​ವುಡ್ ಡ್ರಗ್ ದಂಧೆ: ನಟಿ ಸಂಜನಾ, ರಾಗಿಣಿ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ಬೆಂಗಳೂರು: ಸ್ಯಾಂಡಲ್​ವುಡ್ ಡ್ರಗ್ ದಂಧೆಯಲ್ಲಿ ನಂಟು ಆರೋಪ ಹೊಂದಿರುವ ನಟಿ ಸಂಜನಾ ಹಾಗೂ ರಾಗಿಣಿ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ಸಿಟಿ ಸಿವಿಲ್ ಆವರಣದಲ್ಲಿರುವ ಎನ್​ಡಿಪಿಎಸ್ ವಿಶೇಷ ನ್ಯಾಯಾಲಯದಲ್ಲಿ ನಡೆಯಿತು.ಆದರೆ ವಾದ ಮಂಡನೆಗೆ ಸರ್ಕಾರಿ ವಕೀಲರು ಕಾಲಾವಕಾಶ ಕೇಳಿದ ಹಿನ್ನಲೆಯಲ್ಲಿ ಜಾಮೀನು ಅರ್ಜಿಯ ವಿಚಾರಣೆ ನಾಳೆಗೆ ಮುಂದೂಡಿಕೆ ಆಗಿದೆ. ಹೀಗಾಗಿ ನಟಿ ಸಂಜನಾ, ನಟಿ ರಾಗಿಣಿಯವರಿಗೆ ನಾಳೆಯವರೆಗೆ ಜೈಲೇ ಗತಿ ಎಂಬಂತಾಗಿದೆ.
ಸಂಜನಾ ಹಾಗೂ ರಾಗಿಣಿಯನ್ನು ವಿಚಾರಣೆ ನಡೆಸಲು ಅನುಮತಿ ಕೋರಿ ಇಡಿ ಪರ ಎಸ್​ಪಿಪಿ ಪ್ರಸನ್ನ ಕುಮಾರ್ ನ್ಯಾಯಾಲಯಕ್ಕೆ ಅನುಮತಿ ಕೋರಿದರು. ಅರ್ಜಿಯಲ್ಲಿ ಪರಪ್ಪನ ಅಗ್ರಹಾರದಲ್ಲಿ ನಟಿಮಣಿಯರಿಬ್ಬರನ್ನು ವಿಚಾರಣೆ ನಡೆಸಲು ಅನುಮತಿ ನೀಡುವಂತೆ ಮನವಿ‌ ಮಾಡಿದರು.ಇದೇ ವೇಳೆ ಪ್ರತೀಕ್ ಶೆಟ್ಟಿ ಹಾಗೂ ನಿಯಾಜ್ ಅಹಮ್ಮದ್, ಅಭಿಸ್ವಾಮಿ ಅರ್ಜಿ ವಿಚಾರಣೆ 28ಕ್ಕೆ ಮುಂದೂಡಲಾಗಿದೆ.
ಅಲ್ಲದೆ ಎ5 ವೈಭವ್ ಜೈನ್ ಹಾಗೂ ಎ14 ಸಂಜನಾ ಅರ್ಜಿಗೆ ಸಿಸಿಬಿ ವಕೀಲರು ಆಕ್ಷೇಪಣೆ ಸಲ್ಲಿಕೆ ಮಾಡಿ ವಾದ ಮಾಡಿ ಜಾಮೀನು ನೀಡದಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು. ಹೀಗೆ ವಾದ ಪ್ರತಿವಾದಗಳ ಬಳಿಕ ನಟಿ ಸಂಜನಾ, ರಾಗಿಣಿ ಹಾಗೂ ಇವರ ಆಪ್ತರ ಅರ್ಜಿ ವಿಚಾರಣೆ ನಾಳೆಗೆ ಮುಂದೂಡಲಾಯ್ತು. ನಾಳೆ ವಾದ ಪ್ರತಿವಾದಕ್ಕೆ ನ್ಯಾಯಾಲಯ ಉತ್ತರ ಕೊಡಲು ಕಾಲವಾಕಾಶ ನೀಡಿ ವಿಚಾರಣೆ ಮುಂದೂಡಿದೆ. ನಾಳೆ ಮತ್ತೆ ವಿಚಾರಣೆ ನಡೆಯಲಿದ್ದು, ಸದ್ಯ ನಟಿಮಣಿಯರು ಜೈಲಲ್ಲೇ ಇರಬೆಕಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss