Friday, August 19, 2022

Latest Posts

ಸ್ಯಾಂಡಲ್​​ವುಡ್​​ ಡ್ರಗ್ಸ್ ದಂಧೆ: ವಿಚಾರಣೆಗಾಗಿ ಬ್ರಹ್ಮಗಂಟು ಧಾರಾವಾಹಿ ನಟಿಗೆ ‘ಐಎಸ್​​ಡಿ’ ತಂಡ ಬುಲಾವ್!​

ಬೆಂಗಳೂರು: ಸ್ಯಾಂಡಲ್​​ವುಡ್​​ ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿ ಇಂದು ರಾಜ್ಯ ಆಂತರಿಕ ಭದ್ರತಾ ವಿಭಾಗವು ನಟ ಯೋಗಿ, ಮಾಜಿ ಕ್ರಿಕೆಟಿಗ ಅಯ್ಯಪ್ಪ ವಿಚಾರಣೆಗೊಳಪಡಿಸಿದ್ದಾರೆ .
ಇದೀಗ ಡ್ರಗ್ಸ್ ದಂಧೆ ಸಂಬಂಧಿಸಿ ಬ್ರಹ್ಮಗಂಟು ಧಾರಾವಾಹಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಪ್ರಮುಖ ನಟಿಗೆ ‘ಐಎಸ್​​ಡಿ’ ತಂಡ ಬುಲಾವ್​ ನೀಡಿದೆ.
ರಾಜ್ಯ ಆಂತರಿಕ ಭದ್ರತಾ ವಿಭಾಗದ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ಜಾರಿ ಮಾಡಿದ್ದು, ಹೀಗಾಗಿ ನಟಿ ಗೀತಾ ಭಾರತಿ ಭಟ್ ಸೇರಿದಂತೆ ಇಬ್ಬರು ನಾಳೆ ವಿಚಾರಣೆಗೊಳಪಡಲಿದ್ದಾರೆ.
‘ಐಎಸ್​​ಡಿ’ ತಂಡ ಡ್ರಗ್ಸ್ ಕೇಸ್ ಸಂಬಂಧ ತನಿಖೆ ನಡೆಸಿ ಇತ್ತೀಚೆಗೆ ಬಂಧನಕ್ಕೊಳಗಾದ‌ ಆರೋಪಿ ಮೊಬೈಲ್​ನಲ್ಲಿ ಒಳ ಹಾಗೂ ಹೊರ ಹೋಗುವ ಕರೆ (ಸಿಡಿಆರ್) ತನಿಖೆ ನಡೆಸಿದಾಗ ನಟಿ ಗೀತಾ ಭಾರತಿ ಭಟ್ ಹಾಗೂ ಸ್ಥಳೀಯ ಖಾಸಗಿ ವಾಹಿನಿಯಲ್ಲಿ ಕೆಲಸ ಮಾಡುತ್ತಿರುವ ಆ್ಯಂಕರ್ ಅಭಿಷೇಕ್ ಎಂಬುವರಿಗೆ ಡ್ರಗ್ಸ್ ಫೆಡ್ಲರ್ ಕರೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಹೀಗಾಗಿ ನಾಳೆ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್​​ ಜಾರಿ ಮಾಡಿದೆ‌.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!