ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣದಲ್ಲಿ ಮಾಜಿ ಸಚಿವ ದಿ. ಜೀವರಾತ್ ಆಳ್ವಾ ಪುತ್ರ ಆದಿತ್ಯ ಆಳ್ವಾ ಒಡೆತನದ ರೆಸಾರ್ಟ್ ಮೇಲೆ ಸಿಸಿಬಿ ದಾಳಿ ನಡೆದಿದೆ.
ಡ್ರಗ್ಸ್ ದಂಧೆ ಪ್ರಕರಣದ ಆರೋಪಿಯಾಗಿರುವ ಆದಿತ್ಯಾ ಆಳ್ವಾ ಮನೆ ಮೇಲೆ ಇಂದು ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸೆ.4 ರಿಂದ ಆದಿತ್ಯ ಆಳ್ವಾ ತಲೆಮರೆಸಿಕೊಂಡಿದ್ದು, ಸರ್ಚ್ ವಾರೆಂಟ್ ಪಡೆದು ಸಿಸಿಬಿ ಅಧಿಕಾರಿಗಳು ಶೊಧ ನಡೆಸಿದ್ದಾರೆ.