Friday, August 19, 2022

Latest Posts

ಸ್ಯಾಂಡಲ್ ವುಡ್ ಡ್ರಗ್ಸ್​ ದಂಧೆ: ಮತ್ತೋರ್ವ ಶಂಕಿತ ಆರೋಪಿ ಸಿಸಿಬಿ ಪೊಲೀಸರ ವಶಕ್ಕೆ

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್​ ದಂಧೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಸಂಗೀತ್ ದಂತಕುಡಿ ಎಂಬಾತನನ್ನು ವಶಕ್ಕೆ‌ ಪಡೆದಿದ್ದಾರೆ.
ಈತ ಭೂಗತ ದೊರೆಯಾಗಿದ್ದ ಮುತ್ತಪ್ಪ ರೈ ಆಪ್ತರ ವಲಯದಲ್ಲಿ ಗುರುತಿಸಿಕೊಂಡಿದ್ದ ಎನ್ನಲಾಗುತ್ತಿದ್ದು, ಸದಾಶಿವನಗರದ ಫ್ಲಾಟ್​ನಲ್ಲಿ ಸಿಸಿಬಿ ಪೊಲೀಸರು ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಈಗಾಗಲೇ ಬಂಧನಕ್ಕೊಳಗಾಗಿರುವ ಆರೋಪಿಗಳಿಗೆ ಈತ ಮಾದಕ ವಸ್ತು ಸರಬರಾಜು ಮಾಡುತ್ತಿದ್ದ ಮತ್ತು ರಾತ್ರಿ ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿಗಳಲ್ಲಿ ಭಾಗಿಯಾಗುತ್ತಿದ್ದ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆ ಇಂದು ಬೆಳಗ್ಗೆಯಿಂದ ಸಂಗೀತ್​ನನ್ನು ಸಿಸಿಬಿ ಅಧಿಕಾರಿಗಳು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ಈಗಾಗಲೇ ಬಂಧಿತನಾಗಿರುವ ವಿರೇನ್‌ ಖನ್ನಾ ಸೇರಿದಂತೆ 10 ಮಂದಿ‌ ಆರೋಪಿಗಳ ಜೊತೆ ಗುರುತಿಸಿಕೊಂಡಿದ್ದ ವಸ್ತ್ರ ವಿನ್ಯಾಸಕ ರಮೇಶ್ ದೆಂಬುಲಾ ಎಂಬಾತನನ್ನು ಕಳೆದ‌ ಶನಿವಾರ ಇಡೀ ದಿನ ಸಿಸಿಬಿ ಅಧಿಕಾರಿಗಳು‌ ವಿಚಾರಣೆಗೊಳಪಡಿಸಿದ್ದರು.‌‌ ಇದೀಗ ಮತ್ತೆ ನೊಟೀಸ್ ನೀಡಿ ಕರೆಸಿ ತೀವ್ರ ವಿಚಾರಣೆ ನಡೆಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!