ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ಪ್ರಕರಣದಲ್ಲಿ ಸಿಸಿಬಿ ವಶದಲ್ಲಿರುವ ವೀರನ್ ಖನ್ನಾಗೆ ನಾರ್ಕೋ ಅನಾಲಿಸ್ ಟೆಸ್ಟ್ ಗೆ ಕೋರ್ಟ್ ಅನುಮತಿ ನೀಡಿದೆ.
33 ನೇ ಸಿಸಿಹೆಚ್ ವಿಶೇಷ ಕೋರ್ಟ್ ವೀರನ್ ಖನ್ನಾಗೆ ನಾರ್ಕೋ ಅನಾಲಿಸ್ ಟೆಸ್ಟ್ ಗೆ ಅನುಮತಿ ನೀಡಿದೆ. ವೀರನ್ ಖನ್ನಾ ಡ್ರಗ್ಸ್ ಮತ್ತು ಡ್ರಗ್ಸ್ ತರಿಸುತ್ತಿದ್ದ ಕುರಿತು ಮಾಹಿತಿ ನೀಡದ ಹಿನ್ನೆಲೆಯಲ್ಲಿ ಕೋರ್ಟ್ ನಲ್ಲಿ ನಾರ್ಕೋಟ್ ಟೆಸ್ಟ್ ಗೆ ಸಿಸಿಬಿ ಪೊಲೀಸರು ಮನವಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಖನ್ನಾ ನ್ನು ಪರೀಕ್ಷೆಗಾಗಿ ಅಲಹಬಾದ್ ಗೆ ಶಿಫ್ಟ್ ಮಾಡುವ ಸಾಧ್ಯತೆ ಇದೆ. ಆದರೆ, ಈ ಪರೀಕ್ಷೆಗೆ ವೀರೆನ್ ಖನ್ನಾ ಒಪ್ಪಬೇಕು. ಈವರೆಗೆ ವೀರನ್ ಖನ್ನಾ ಒಪ್ಪಿಗೆ ನೀಡಿಲ್ಲ ಎನ್ನಲಾಗಿದೆ.