Wednesday, August 17, 2022

Latest Posts

ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ: ಬಂಧಿತ ಅಫ್ರಿಕನ್‌ ಆರೋಪಿ ಜೊತೆ‌ ಸಂಪರ್ಕದಲ್ಲಿದ್ದ ಮತ್ತೋರ್ವ ವಿದೇಶಿ ಪ್ರಜೆ ವಶಕ್ಕೆ

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ನಂಟು ಪ್ರಕರಣ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಮತ್ತೊಂದೆಡೆ ಉಡೆನ್ ಡಾನ್ ಎಂಬ ವಿದೇಶಿ ಪ್ರಜೆಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆಫ್ರಿಕನ್ ಪ್ರಜೆಗಳ ಜೊತೆ ಸಂಪರ್ಕ ಹೊಂದಿದ್ದ ಆರೋಪ ಹಿನ್ನೆಲೆ ವಿಚಾರಣೆ ನಡೆಸಲಾಗುತ್ತಿದೆ.
ಮಾದಕ ವಸ್ತು ಸೇವನೆ ಮಾಡುತ್ತಿದ್ದ ಆರೋಪ ಹಿನ್ನೆಲೆಯಲ್ಲಿ ಉದ್ಯಮಿ ಹಾಗೂ ಡ್ರಗ್ಸ್ ಪೆಡ್ಲರ್​ ಓರ್ವನನ್ನು ಸಂಜಯ್ ನಗರ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.
ಜೆಸಿ ನಗರ ಎಸಿಪಿ ರೀನಾ‌ ಸುವರ್ಣ ಹಾಗೂ ಸಂಜಯ್ ನಗರ ಇನ್ಸ್ ಪೆಕ್ಟರ್ ಬಾಲಾಜಿ, ಇಬ್ಬರು ಆರೋಪಿಗಳಾದ ವರುಣ್ ಹಾಗೂ ವಿನೋದ್ ಎಂಬುವರನ್ನು ವಿಚಾರಣೆ ನಡೆಸುತ್ತಿದ್ದಾರೆ. ಡಾಲರ್ಸ್ ಕಾಲೋನಿಯ ನಿವಾಸದಲ್ಲಿ ಡ್ರಗ್ಸ್ ಸೇವನೆ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ‌‌ ನಡೆಸಿ ಇಬ್ಬರನ್ನು ವಶಕ್ಕೆ ಪಡೆದಿದ್ದರು.‌ ಮನೆಯಲ್ಲಿ‌ ಸಿಂಥೆಟಿಕ್ ಮಾದಕ‌ ವಸ್ತು ಪತ್ತೆಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!