ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿರುವ ನಟಿ ರಾಗಿಣಿ ಹಾಗೂ ಸಂಜನಾ ಗಲ್ರಾನಿಗೆ ಇನ್ಮುಂದೆ ಸಾಮಾನ್ಯ ಜೈಲಿಗೆ ಶಿಫ್ಟ್ ಮಾಡಲಾಗುವುದು.
ನಟಿ ರಾಗಿಣಿ ಹಾಗೂ ಸಂಜನಾ 14 ದಿನದಿಂದ ಜೈಲಿನ ಕ್ವಾರಂಟೈನ್ ನಲ್ಲಿದ್ದರು. ಇದೀಗ ಇಬ್ಬರು ನಟಿಯರನ್ನು ಸಾಮಾನ್ಯ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಇಬ್ಬರಿಗೂ ಒಂದೇ ಸೆಲ್ ನಲ್ಲಿ ಹಾಕಲಾಗಿದ್ದು, ಸಾಮಾನ್ಯ ಕೈದಿಯಂತೆ ಇರಲಿದ್ದಾರೆ.
ಹೀಗಾಗಿ ನಟಿ ರಾಗಿಣಿ ಮತ್ತು ಸಂಜನಾ ಸಾಮಾನ್ಯ ಖೈದಿಯಂತೆ ಸರತಿ ಸಾಲಿನಲ್ಲಿ ಉಪಹಾರ, ಊಟ ಪಡೆಯಬೇಕು. ಸಾಮಾನ್ಯ ಕೈದಿಯಂತೆ ರಾಗಿಣಿ ಮತ್ತು ಸಂಜನಾ ಅವರು ಇರಲಿದ್ದಾರೆ.