Tuesday, June 28, 2022

Latest Posts

ಸ್ಯಾಂಡಲ್ ವುಡ್ ನಿರ್ಮಾಪಕ ದಿನೇಶ್ ಗಾಂಧಿ ಹೃದಯಾಘಾತದಿಂದ ನಿಧನ

ಮಂಗಳೂರು: ಸುದೀಪ್ ಅಭಿನಯದ ವೀರ ಮದಕರಿ , ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಮಲ್ಲಿಕಾರ್ಜುನ ಹಾಗೂ ಹೂ ಸಿನಿಮಾ ಸೇರಿದಂತೆ ಹಲವು ಸ್ಯಾಂಡಲ್ ವುಡ್ ಚಿತ್ರಗಳಿಗೆ ನಿರ್ಮಾಪಕರಾಗಿದ್ದಂತ ಕನ್ನಡದ ಸೂಪರ್ ಹಿಟ್ ಚಿತ್ರಗಳ ನಿರ್ಮಾಪಕ ದಿನೇಶ್ ಗಾಂಧಿ(52) ಇಂದು ನಿಧನರಾಗಿದ್ದಾರೆ.
ಇಂದು ಬೆಳಿಗ್ಗೆ 5.30ರ ಸುಮಾರಿಗೆ ನಿರ್ಮಾಪಕ ದಿನೇಶ್ ಗಾಂಧಿ ಅವರು ಹೃದಯಾಘಾತಕ್ಕೆ ಒಳಗಾಗಿದ್ದರು. ಅವರನ್ನೂ ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.
ದಳಪತಿ, ನರಸಿಂಹ ಚಿತ್ರಗಳಿಗೂ ನಿರ್ಮಾಪಕರಾಗಿದ್ದರು. ನಟ ಸಿದ್ಧಾಂತ ಅಭಿನಯದ ಛತ್ರಪತಿ ಚಿತ್ರವನ್ನ ನಿರ್ದೇಶನ ಮಾಡಿದ್ದು , ಈಗ ಮತ್ತೊಂದು ಮಕ್ಕಳ ಚಿತ್ರ ನಿರ್ದೇಶನ ಮಾಡಲು ಕೂಡ ಸಿದ್ಧವಾಗಿದ್ದರು.ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೂಡ ಸೇವೆ ಸಲ್ಲಿಸಿದರು. ಇವರ ಸಾವಿಗೆ ನಟ , ನಟಿಯರು , ತಂತ್ರಜ್ಞರು ಹಾಗೂ ಚಿತ್ರೋದ್ಯಮ ಗಣ್ಯರು ಕಂಬನಿ ಮಿಡಿದಿದ್ದಾರೆ .

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss