Saturday, August 13, 2022

Latest Posts

ಸ್ಯಾನಿಟರಿ ಪ್ಯಾಡ್​ನಲ್ಲಿ 1.1956 ಕೆ.ಜಿ ಚಿನ್ನದ ಪೇಸ್ಟ್​ ಸಾಗಿಸುತ್ತಿದ್ದ ಮಹಿಳೆಯರ ಬಂಧನ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಸ್ಯಾನಿಟರಿ ಪ್ಯಾಡ್​ನಲ್ಲೇ ಚಿನ್ನವನ್ನು ಕಳ್ಳ ಸಾಗಣೆ ಮಾಡುತ್ತಿದ್ದ ಇಬ್ಬರು ಮಹಿಳೆರನ್ನು ತಮಿಳುನಾಡಿನ ಕೊಯಮತ್ತೂರಿನ ಕಸ್ಟಮ್ಸ್​ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ತಮಿಳುನಾಡಿನ ಕೊಯಮತ್ತೂರಿನಲ್ಲಿ ದೇವಾಣಿ ರಾಧಾಕೃಷ್ಣನ್​ ಮತ್ತು ವಸಂತಿ ರಾಮಸ್ವಾಮಿ ಹೆಸರಿನ ಇಬ್ಬರು ಮಹಿಳೆಯರು ಬುಧವಾರ ಮುಂಜಾನೆ 3.30ಕ್ಕೆ ಶಾರ್ಜಾದಿಂದ ಕೊಯಮತ್ತೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಏರ್​ ಅರೇಬಿಯಾ ವಿಮಾನದಲ್ಲಿ ಬಂದಿಳಿದಿದ್ದಾರೆ.
ಮೆಟಲ್​ ಡಿಟೆಕ್ಟರ್​ನಲ್ಲಿ ಪರಿಶೀಲನೆ ಮಾಡುವಾಗ ಆರೋಪಿಗಳು ಸಿಕ್ಕಿಬಿದ್ದಿದ್ದು, ತಾವು ಧರಿಸಿದ್ದ ಸ್ಯಾನಿಟರಿ ಪ್ಯಾಡ್​ನಲ್ಲಿ 62.46 ಲಕ್ಷ ರೂಪಾಯಿ ಮೌಲ್ಯದ 1.1956 ಕೆ.ಜಿ ಚಿನ್ನವನ್ನು ಪೇಸ್ಟ್​ ರೂಪದಲ್ಲಿ ಅವರು ಅಡಗಿಸಿಟ್ಟುಕೊಂಡಿದ್ದರು. ವಿಚಾರ ತಿಳಿದುಬರುತ್ತಿದ್ದಂತೆ ಕಸ್ಟಮ್ಸ್​ ಅಧಿಕಾರಿಗಳು ಮಹಿಳೆಯರನ್ನು ಬಂಧಿಸಿದ್ದಾರೆ.
ದೇವಾಣಿ ಚೆನ್ನೈ ಮೂಲದವರಾಗಿದ್ದು, ವಸಂತಿ ಪಡುಕೊಟ್ಟೈ ಮೂದವರಾಗಿದ್ದಾರೆ. ಕೇವಲ ಇವರಿಬ್ಬರರಷ್ಟೆ ಅಲ್ಲದೆ ಇನ್ನೂ ಐದು ಜನ ಪುರುಷರನ್ನು ಕಸ್ಟಮ್ಸ್​ ಅಧಿಕಾರಿಗಳು ಬಂಧಿಸಿದ್ದಾರೆ. ಅದೇ ವಿಮಾನದಲ್ಲಿ ಪ್ರಯಾಣ ಮಾಡಿದ್ದ ಐವರು ಪುರುಷರು, 46 ಲಕ್ಷ ರೂಪಾಯಿ ಮೌಲ್ಯದ ಚಿನ್ನ, ಮದ್ಯ ಮತ್ತು ಸಿಗರೇಟ್​ ಸಾಗಣೆ ಮಾಡುತ್ತಿದ್ದರು ಎನ್ನಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss