ಸುಂಟಿಕೊಪ್ಪ: ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ನೆಲೆಸಿದ್ದ ಹೊರ ಜಿಲ್ಲೆಯ ವಲಸೆ ಕಾರ್ಮಿಕರನ್ನು ಸರಕಾರಿ ಬಸ್ಗಳ ಮೂಲಕ ಅವರ ಸ್ವಂತ ಊರುಗಳಿಗೆ ಮಂಗಳವಾರ ಕಳುಹಿಸಿಕೊಡಲಾಯಿತು.
ಲಾಕ್ಡೌನ್ ಸಡಿಲಿಕೆ ಮಾಡಿರುವ ಹಿನ್ನೆಲೆಯಲ್ಲಿ ಸುಂಟಿಕೊಪ್ಪ ಹಾಗೂ ಸುತ್ತ ಮುತ್ತಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಜಿಕೆರೆ ಚಾಮುಂಡಿ ತೋಟದಲ್ಲಿದ್ದ ಮಕ್ಕಳೂ ಸೇರಿದಂತೆ 13, ಸುಂಟಿಕೊಪ್ಪದಿಂದ 3 ಮಂದಿ, ಸಮೀಪದ ಕಿರಗಂದೂರು ತೋಟದಿಂದ 10 ಮಂದಿ ಸೇರಿದಂತೆ ೨೭ಮಂದಿಯನ್ನು ಮಂಗಳವಾರ ಮಧ್ಯಾಹ್ನ ರಾಜ್ಯ ಸಾರಿಗೆ ಸಂಸ್ಥೆ ಬಸ್ ಮೂಲಕ ಚಾಮರಾಜನಗರ ಮತ್ತು ಕೊಳ್ಳೆಗಾಲಕ್ಕೆ ಕಳುಹಿಸಿಕೊಡಲಾಯಿತು.
ಈ ಸಂದರ್ಭ ಎಎಸ್ಐ ಶ್ರೀನಿವಾಸ್, ಪಿಡಿಒ ವೇಣುಗೋಪಾಲ್, ಗ್ರಾ.ಪಂ. ಅಧ್ಯಕ್ಷೆ ರೋಸ್ ಮೇರಿ ರಾಡ್ರಿಗಸ್, ಸದಸ್ಯೆ ನಾಗರತ್ನ ಸುರೇಶ್, ಸಿಬ್ಬಂದಿ ಪುನೀತ್ ಕುಮಾರ್, ಶ್ರೀನಿವಾಸ್, ಅಂಬೇಡ್ಕರ್ ಸಂಘದ ಅಧ್ಯಕ್ಷ ಎಂ.ಎಸ್.ರವಿ ಇತರರು ಇದ್ದರು.