ಕಲಬುರಗಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಹಳೆಯ ಬಸ್ ಉಪಯೋಗಿಸಿಕೊಂಡು ಮಾಡಿರುವ ಈ ಶೌಚಾಲಯ ಎರಡು ವಿಷಯಗಳಲ್ಲಿ ಮಾದರಿ ಮೆರೆದಿದೆ. ಇದರಲ್ಲಿ ಶೌಚ, ಬಚ್ಚಲುಮನೆ, ಕಂದಮ್ಮಗಳಿಗೆ ಹಾಲೂಡಿಸುವುದಕ್ಕೆ ಕೊಠಡಿ ಇರುವುದರಿಂದ ಇದು ಮಹಿಳೆಯರಿಗೆ ಸೌಕರ್ಯ ಮತ್ತು ಸಮ್ಮಾನ ಹೆಚ್ಚಿಸಿಕೊಟ್ಟಿದ್ದರಲ್ಲಿ ಒಂದು ಮಾದರಿ ಹೆಜ್ಜೆ.
ಸೆಲ್ಕೊದ ಸಹಯೋಗದಿಂದ ನಿರ್ಮಾಣವಾಗಿರುವ ಇದು ಸೌರಶಕ್ತಿ ಅವಲಂಬಿತ. ಹೀಗಾಗಿ ಇಂಗಾಲ ವಿಸರ್ಜನೆ ಕಡಿಮೆಯಾಗಿಸುವ ಶುದ್ಧಶಕ್ತಿಮೂಲದ ಬಳಕೆಯೂ ಆದಂತಾಯಿತು. ಬಸ್ಸಿನ ಚಾವಣಿಗೇ ಸೋಲಾರ್ ಫಲಕಗಳನ್ನು ಅಳವಡಿಸಲಾಗಿದೆ.
ಸುಮಾರು 4.5 ಲಕ್ಷ ರುಗಳ ಖರ್ಚಿನಲ್ಲಿ ಮಾಡಿರುವ ಈ ವ್ಯವಸ್ಥೆ ಬಳಕೆಗೆ ಪ್ರತಿ ವ್ಯಕ್ತಿಗೆ ಐದು ರುಪಾಯಿ ಶುಲ್ಕ ತೆಗೆದುಕೊಳ್ಳಲಾಗುತ್ತದೆ. ಈ ಮಾದರಿಯನ್ನು ಇತರೆಡೆಯಲ್ಲೂ ಜಾರಿಗೆ ತರುವ ಚಿಂತನೆ ಇದೆ ಎಂದು ಸಾರಿಗೆ ಸಚಿವರು ಹೇಳಿದ್ದಾರೆ.