ಹೊಸ ದಿಗಂತ ವರದಿ, ಕಲಬುರಗಿ:
ಸ್ವದೇಶಿ ಚಳುವಳಿ ಹರಿಕಾರ ದಿ.ರಾಜೀವ ದೀಕ್ಷಿತ ಸ್ಮರಣಾರ್ಥ ಸ್ವದೇಶಿ ದಿನಾಚರಣೆ ಅಂಗವಾಗಿ ಆಜಾದಿ ಬಚಾವೋ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಆಂದೋಲನದ ಪ್ರಮುಖ ಸಂಚಾಲಕ ಎಂ.ಡಿ.ಪಾಟೀಲ್ ತಿಳಿಸಿದರು.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜೀವ ದೀಕ್ಷಿತ್ ಅವರ ಸ್ವದೇಶಿ ಚಿಂತನೆ ಉಳಿಸಿ ಬೆಳೆಸುವ ಹಾಗೂ ಅವರ ವಿಚಾರ ಕಾರ್ಯರೂಪಕ್ಕೆ ತರುವ ಪ್ರಯತ್ನ ನಿಟ್ಟಿನಲ್ಲಿ
ಗೃಹ ಕೃಗಾರಿಕೆಗಳು ಉತ್ತೇಜಿಸಲು ಈ ಆಂದೋಲನ ಶುರು ಮಾಡಲಾಗಿದೆ.
ಸ್ವಾವಲಂಬನೆ ಜೀವನಕ್ಕಾಗಿ ಯುವಕರಿಗೆ ಸಣ್ಣ ಮತ್ತು ಗೃಹ ಕೈಗಾರಿಕಾ ತರಬೇತಿನೀಡಲು ಧಾರವಾಡದಲ್ಲಿ ಗಾಣದ ಅಡುಗೆ ಎಣ್ಣೆ ಉತ್ಪಾದನಾ ತರಬೇತಿ ಆಯೋಜಿಸಲಾಗಿದೆ ಎಂದರು.
ಕಲಬೆರಕೆ ಹಾಗೂ ರಾಸಾಯನಿಕಗಳ ರಹಿತವಾದ ಅಡುಗೆ ಎಣ್ಣೆ ಉತ್ಪಾದಿಸಲು ಮತ್ತು ಯಂತ್ರಗಳ ಸ್ಥಾಪನೆ ಮತ್ತು ನಿರ್ವಹಣೆ ಬಗ್ಗೆ ಎರಡು ದಿನಗಳ ಕಾಲ ತರಬೇತಿ ಕೊಡಲಾಗುವುದು. ಬ್ಯಾಂಕುಗಳಿಂದ ಸಾಲ ಸೌಲಭ್ಯವೂ ಒದಗಿಸಲಾಗುವುದು. ಕೇವಲ ಯಂತ್ರ ಕೊಡಿಸುವುದಷ್ಟೇ ಅಲ್ಲ, ಅದರೊಂದಿಗೆ ಮಾರುಕಟ್ಟೆಗೆ ಸಹಕರಿಸಲಾಗುವುದು ಎಂದರು.
ಈಗ ಮೊದಲ ಹಂತದ ತರಬೇತಿಗೆ 20 ಜನರನ್ನು ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಆಸಕ್ತರು ಹೆಚ್ಚಾದಲ್ಲಿ ಆಯಾ ಜಿಲ್ಲೆಗಳಲ್ಲಿ ತರಬೇತಿ ನೀಡಲಾಗುವುದು. ತರಬೇತಿಗೆ 2 ಸಾವಿರ ರೂ. ಶುಲ್ಕ ನಿಗದಿ ಮಾಡಲಾಗಿದೆ. ಎರಡು ದಿನಗಳ ಕಾಲ ವಸತಿ ಮತ್ತು ಊಟದ ವ್ಯವಸ್ಥೆ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೊ.ನಂ.94483 60021ಗೆ ಸಂಪರ್ಕಿಸಬಹುದು ಎಂದರು.
ಸುದ್ದಿಗೋಷ್ಠಿಯಲ್ಲಿ ಪಿ.ಬಿ.ಹರಿಶ್ಚಂದ್ರ, ಅಶೋಕ ಗುರೂಜಿ, ಅನಿಲ್ ತಂಬಾಕೆ, ಪುರಷೋತ್ತಮ, ಶಿವಾನಂದ ಕುಂಬಾರ, ಪ್ರಭು ಪಾಟೀಲ ಇದ್ದರು.