Tuesday, July 5, 2022

Latest Posts

ಸ್ವಾವಲಂಬಿ ಭಾರತಕ್ಕೆ 20 ಲಕ್ಷ ಕೋಟಿ ರೂ. ಆರ್ಥಿಕ ಪ್ಯಾಕೇಜ್: ಪ್ರಧಾನಿ ನರೇಂದ್ರ ಮೋದಿ

ಹೊಸದಿಲ್ಲಿ: ಕೊರೋನಾ ಸೋಂಕಿನ ಹಿನ್ನಲೆ ಲಾಕ್ ಡೌನ್ 4.0 ಕುರಿತಾಗಿ ಪ್ರಧಾನಿ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿದರು. ವಿಶ್ವದಲ್ಲಿ ಸ್ವಾವಲಂಬಿ ದೇಶವಾಗಿರುವ ಭಾರತ ಕೊರೋನಾ ಸಂಕಷ್ಟದಲ್ಲಿ ದೇಶಕ್ಕೆ 20 ಲಕ್ಷ ಕೋಟಿ ರೂ.ಗಳ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದಾರೆ.

ಮಾನವರು ಎಂದು ಕೇಳರಿಯದ ವೈರಾಣುವಿನಿಂದ ಇದೀಗ ಇಡೀ ವಿಶ್ವವೇ ತತ್ತರಿಸಿ ಹೋಗಿದ್ದು, ಆದರೆ ಭಾರತ ಎಂದಿಗೂ ಧೃತಿಗೆಡುವುದಿಲ್ಲ ಎಂದು ಹೇಳಿದರು.

‘ಸ್ವಾವಲಂಬಿ ಭಾರತ’ ಎಂದು ಹೇಳುತ್ತಿದ್ದ ಪ್ರಧಾನಿ ಮೋದಿ ವಿಶ್ವದಲ್ಲಿ ಮರಣಮೃದಂಗ ಭಾರಿಸುತ್ತಿರುವ ಕೊರೋನಾ ಬಿಕ್ಕಟ್ಟಿನಲ್ಲಿ ಭಾರತ ಎಂದಿಗೂ ಆರ್ಥಿಕವಾಗಿ ಕುಗ್ಗುವುದಿಲ್ಲ. ಕೊರೋನಾ ಸಂಕಷ್ಟದಲ್ಲಿ ಭಾರತ ಆರ್ಥಿಕ ಪ್ಯಾಕೇಜ್ 20 ಲಕ್ಷ ಕೋಟಿ ರೂ. ಘೋಷಿಸಿದ್ದು, ಇದು ದೇಶದ ಜಿಡಿಪಿ(ಆಂತರಿಕ ಉತ್ಪನ್ನದ) ಶೇ.10ಎಷ್ಟು ಮೊತ್ತವಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಕೇಂದ್ರ ವಿತ್ತ ಸಚಿವಾಲಯ ಈ ಪ್ಯಾಕೇಜ್ ಕುರಿತಾಗಿ ಸಂಪೂರ್ಣ ಮಾಹಿತಿ ನೀಡಲಿದೆ ಎಂದರು.

ವಿಶ್ವದ ಪರಿಸ್ಥಿತಿ ಭಾರತಕ್ಕೆ ಮಾದರಿಯಾಗಬೇಕು. ವಿಶ್ವದಲ್ಲಿ ಕೊರೋನಾ ಆವರಿಸಿದಾಗ ಭಾರತದಲ್ಲಿ ಪಿಪಿಇ ಕಿಟ್ ಹಾಗೂ ಎನ್-95 ಮಾಸ್ಕ್ ಗಳನ್ನು ಭಾರತ ತಯಾರಿಸುತ್ತಿರಲಿಲ್ಲ. ಆದರೆ ಈಗ ಭಾರತದಲ್ಲಿ ಪ್ರತಿದಿನ 2ಲಕ್ಷ ಪಿಪಿಇ ಕಿಟ್ ಹಾಗೂ 2 ಲಕ್ಷ ಎನ್-95 ಮಾಸ್ಕ್ ತಯಾರಾಗುತ್ತಿದ್ದೆ ಎಂದು ತಿಳಿಸಿದರು.

ಈ 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ದೇಶದ ರೈತರಿಗೆ, ಕಾರ್ಮಿಕರಿಗೆ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು, ಗುಡಿ ಕೈಗಾರಿಕೆಗಳು, ಪ್ರಾಮಾಣಿಕ ತೆರಿಗೆ ಪಾವತಿ ಮಾಡುವವರಿಗೆ ಈ ಪ್ಯಾಕೇಜ್ ನಲ್ಲಿ ಪಾಲು ನೀಡಲಾಗಿದೆ.

5 ಆಧಾರ ಸ್ತಂಭಗಳು ಯಾವುವು?

  • ಆರ್ಥಿಕತೆ
  • ಮೂಲಸೌಕರ್ಯ
  • ತಂತ್ರಜ್ಞಾನ
  • ಡೆಮೋಗ್ರಫಿ
  • ಬೇಡಿಕೆ ಹಾಗೂ ಪೂರೈಕೆ

ಲಾಕ್ ಡೌನ್ 4.0: ಮೇ.17ರ ಬಳಿಕ ಭಾರತದಲ್ಲಿ ಹೊಸಾ ರೂಪದಲ್ಲಿ ಲಾಕ್ ಡೌನ್ ಜಾರಿಯಾಗಲಿದೆ. ಈವರೆಗಿನ 3 ಲಾಕ್ ಡೌನಿಗಿಂತಲೂ ಲಾಕ್ ಡೌನ್ 4.0 ವಿಭಿನ್ನವಾಗಿರಲಿದೆ ಎಂದು ಪ್ರಧಾನಿ ತಿಳಿಸಿದ್ದು, ಮುಂದಿನ ದಿನಗಳಲ್ಲಿ ಲಾಕ್ ಡೌನ್ ಹೊಸ ಸ್ವರೂಪ ಕೈಗೊಳ್ಳಲಿದೆ ಎಂದು ಸುಳಿವು ನೀಡಿದರು.

ಸ್ವದೇಶಿ ಮಾರುಕಟ್ಟೆ:  ದೇಶಾದ್ಯಂತ ಲಾಕ್ ಡೌನ್ ನಿಂದಾಗಿ ಸ್ಥಳಿಯ ಕಿರಾಣಿ ಅಂಗಡಿಗಳು ನಮ್ಮ ಕೈಹಿಡಿದಿದೆ. ಹಾಗಾಗಿ ಲಾಕ್ ಡೌನದ ನಂತರವೂ ಸ್ಥಳಿಯ ಮಾರುಕಟ್ಟೆಗೆ ಜನ ಪ್ರೋತ್ಸಾಹಿಸಬೇಕು ಎಂದು ಹೇಳಿದ್ದು, ವಿದೇಶಿ ನಿರ್ಮಿತ ವಸ್ತುಗಳ ಖರೀದಿಯನ್ನು ಆದಷ್ಟು ಕಡಿಮೆ ಮಾಡಬೇಕು ಎಂದು ಪರೋಕ್ಷವಾಗಿ ಸಾರಿದ್ದಾರೆ. ಅಲ್ಲದೇ ದೇಶದಲ್ಲೇ ನಿರ್ಮಿತವಾಗಿರುವ ವಸ್ತುಗಳನ್ನು ಬಳಸುವುದಲ್ಲದೇ, ಅದರ ಪ್ರಚಾರ ಮಾಡಿ ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅಭಿಪ್ರಾಯ: ಕೊರೋನಾ ಬಿಕ್ಕಟ್ಟು ಸಮರ್ಥವಾಗಿ ನಿಭಾಯಿಸಲು, ಆರ್ಥಿಕತೆ ಶಕ್ತಿ ತುಂಬಲು, ಸಂಕಷ್ಟ ಎದುರಿಸುತ್ತಿರುವ ಎಲ್ಲರ ಏಳಿಗೆ ದಿಸೆಯಲ್ಲಿ ಮೋದಿ ಅವರು ಘೋಷಿಸಿರುವ ಆರ್ಥಿಕ ಪ್ಯಾಕೇಜ್ ಸ್ವಾಗತಾರ್ಹ ಎಂದರು.

   

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss