Saturday, August 13, 2022

Latest Posts

ಸ್ವಾವಲಂಭಿ ಭಾರತಕ್ಕೆ ಮಿಲಿಟರಿ ಬಲ| 1.75 ಲಕ್ಷ ಕೋಟಿ ರೂ. ಮೌಲ್ಯದ ರಕ್ಷಣಾ ಉತ್ಪಾದನೆ ಮತ್ತು ರಫ್ತು ನೀತಿ

ಹೊಸದಿಲ್ಲಿ: ರಕ್ಷಣಾ ಸಚಿವಾಲಯ ಸಿದ್ಧಪಡಿಸಿದ ಪ್ರಮುಖ ರಕ್ಷಣಾ ಉತ್ಪಾದನೆ ಮತ್ತು ರಫ್ತು ಉತ್ತೇಜನ ನೀತಿ 2020 ರ ಕರಡು ಬಿಡುಗಡೆ ಮಾಡಿದ್ದು, 2025 ರ ವೇಳೆಗೆ ರಕ್ಷಣಾ ಉತ್ಪಾದನೆಯಲ್ಲಿ 1.75 ಲಕ್ಷ ಕೋಟಿ ರೂ. ಮೌಲ್ಯದ ಸರಕುಗಳ ಉತ್ಪಾದನೆ ಮಾಡಲು ತೀರ್ಮಾನಿಸುತ್ತಿದೆ.

ರಕ್ಷಣಾ ಉತ್ಪಾದನೆ ಮತ್ತು ರಫ್ತು ಉತ್ತೇಜನ ನೀತಿ 2020 ರ ಕರಡು ಮುಂದಿನ ಐದು ವರ್ಷಗಳಲ್ಲಿ ಏರೋಸ್ಪೇಸ್ ಮತ್ತು ರಕ್ಷಣಾ ಸರಕು ಮತ್ತು ಸೇವೆಗಳಲ್ಲಿ 35,000 ಕೋಟಿ ರೂ. (5 ಬಿಲಿಯನ್ ಡಾಲರ್) ರಫ್ತು ಗುರಿಯನ್ನು ನಿಗದಿಪಡಿಸಿದೆ, ಇದು ಒಟ್ಟು ಯೋಜಿತ ವಹಿವಾಟಿನ ಭಾಗವಾಗಿ ಅಂದಾಜಿಸಲಾಗಿದೆ.

ಮಿಲಿಟರಿ ಯಂತ್ರಾಂಶ ಮತ್ತು ಸ್ವಾವಲಂಬನೆ ಮತ್ತು ರಫ್ತು ಉತ್ಪಾದನೆಗೆ ಮಹತ್ವದ ವೇದಿಕೆಯನ್ನು ಒದಗಿಸಲು ರಕ್ಷಣಾ ಸಚಿವಾಲಯ ತೀರ್ಮಾನಿಸಿರುವುದಾಗಿ ಮೂಲಗಳ ವರದಿ ತಿಳಿಸಿದೆ.

ಮೇ ತಿಂಗಳಲ್ಲಿ, ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ರಕ್ಷಣಾ ಕ್ಷೇತ್ರಕ್ಕೆ ಹಲವಾರು ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದು, ಭಾರತೀಯ ನಿರ್ಮಿತ ಮಿಲಿಟರಿ ಯಂತ್ರಾಂಶವನ್ನು ಸಂಗ್ರಹಿಸಲು ಪ್ರತ್ಯೇಕ ಬಜೆಟ್ ವಿನಿಯೋಗ, ಎಫ್‌ಡಿಐ ಮಿತಿಯನ್ನು ಸ್ವಯಂಚಾಲಿತ ಮಾರ್ಗದಲ್ಲಿ ಶೇ. 49 ರಿಂದ 74ಕ್ಕೆ ಹೆಚ್ಚಿಸಿದ್ದು, ಜಾಗತಿಕ ರಕ್ಷಣಾ ದೈತ್ಯರಿಗೆ ಭಾರತವು ಹೆಚ್ಚು ಲಾಭದಾಯಕ ಮಾರುಕಟ್ಟೆಗಳಲ್ಲಿ ಒಂದಾಗಿದೆ.

ಕಳೆದ ಎಂಟು ವರ್ಷಗಳಿಂದ ವಿಶ್ವದ ಮಿಲಿಟರಿ ಯಂತ್ರಾಂಶವನ್ನು ಆಮದು ಮಾಡಿಕೊಳ್ಳುವವರಲ್ಲಿ ಅಗ್ರ ಮೂರು ಸ್ಥಾನದಲ್ಲಿದೆ. ಮುಂದಿನ ಐದು ವರ್ಷಗಳಲ್ಲಿ ಭಾರತೀಯ ಸಶಸ್ತ್ರ ಪಡೆಗಳು ಸುಮಾರು 130 ಶತಕೋಟಿ ಡಾಲರ್ ಬಂಡವಾಳ ಸಂಗ್ರಹಕ್ಕಾಗಿ ಖರ್ಚು ಮಾಡುವ ನಿರೀಕ್ಷೆಯಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss