ಹೊಸ ದಿಗಂತ ವರದಿ, ಬಳ್ಳಾರಿ:
ವಿಜಯನಗರ ಕ್ಷೇತ್ರದ ಐತಿಹಾಸಿಕ ಪ್ರವಾಸಿ ತಾಣ ಹಂಪಿಯಲ್ಲಿ ಬುಧವಾರ ಪ್ರಭು ಶ್ರೀ ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಮಹಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀ ವಿದ್ಯಾರಣ್ಯ ಸ್ವಾಮೀಜಿ ಮಹಾ ಮಠದಲ್ಲಿ ಶ್ರೀ ರಾಮ, ಸೀತಾ, ಹಾಗೂ ಲಕ್ಷಣ ದೇವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ವಿವಿಧ ಗಣ್ಯರು ಚಾಲನೆ ನೀಡಿದರು.
ಐತಿಹಾಸಿಕ ಕ್ಷೇತ್ರ ಹಂಪಿಗೂ ಪ್ರಭು ಶ್ರೀ ರಾಮನಿಗೂ ಅವಿನಾವಭಾವ ಸಂಬಂದವಿದ್ದು, ರಾವಣನಿಂದಾ ಸೀತಾ ಮಾತೆಯ ಅಪಹರಣವಾದಾಗ ಪ್ರಭು ಶ್ರೀ ರಾಮಚಂದ್ರನು ಸೀತೆಯನ್ನು ಹುಡುಕುತ್ತಾ ಬಂದಾಗ ಇಲ್ಲಿ ಶ್ರೀರಾಮನ ಪರಮ ಭಕ್ತ ಶ್ರೀ ಹನುಮಂತನ ಪರಿಚಯವಾಗಿ ಆ ಹನುಮಂತನ ಸಹಾಯದಿಂದಾ ಲಂಕೆಯಲ್ಲಿ ಅಶೋಕ ವನದಲ್ಲಿ ಸೀತಾ ಮಾತೆಯನ್ನು ಹುಡುಕಿ ಕೊಟ್ಟ ಕೀರ್ತಿ ಹನುಮಂತನಿಗೆ ಸಲ್ಲಲಿದೆ. ಅಂಥಹ ಐತಿಹಾಸಿಕ ಸ್ಥಳ ಇದಾಗಿದೆ.
ಸಂಘದ ಹಿರಿಯರಾದ ಅನೀಲ್ ಜೋಶಿ, ರೇವಣ ಸಿದ್ದಪ್ಪ ಅವರು ಮಾತನಾಡಿ, ಕ್ಷೇತ್ರದ ಪ್ರತಿಯೊಂದು ಮನೆಯಿಂದಲೂ ಶ್ರೀ ರಾಮ ಮಂದಿರ ನಿರ್ಮಾಣದ ನಿಧಿ ಸಮರ್ಪಣಾ ಅಭಿಯಾನದಲ್ಲಿ ಭಾಗವಹಿಸಿ ತಮ್ಮ ತಮ್ಮ ಅಳಿಲು ಸೇವೆ ಮಾಡುವ ಮೂಲಕ ಶ್ರೀ ರಾಮ ಮಂದಿರ ನಿರ್ಮಾಣ ಸಮರ್ಪಣಾ ಅಭಿಯಾನದಲ್ಲಿ ಪ್ರತಿಯೊಬ್ಬರೂ ಭಾಗವಹಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಹಿರಿಯರಾದ ಪಾಂಡುರಂಗ ನರಗುಂದ ಹಾಗೂ ಪ್ರಕಾಶ್ ಕುಲಕರ್ಣಿ, ಮುರುಳಿ, ಕೃಷ್ಣ, ಶ್ರೀ ನಿವಾಸ ಸೇರಿದಂತೆ ಗ್ರಾ.ಪಂ. ಸದಸ್ಯರಾದ ಸ್ವಾತಿ ಸಿಂಗ್ ಹಾಗೂ ವಿರೂಪಾಕ್ಷಪ್ಪ ಇತರರು ಅಭಿಯಾನದಲ್ಲಿ ಉಪಸ್ಥಿತರಿದ್ದರು.