Wednesday, August 10, 2022

Latest Posts

ಹಕ್ಕಿ ಜ್ವರಕ್ಕೆ ಪ್ರಧಾನಿ ಮೋದಿಯೇ ಕಾರಣವಂತೆ!

ಹೊಸ ದಿಗಂತ ಆನ್ ಡೆಸ್ಕ್:

ಕೊರೋನಾ ನಡುವೆ ದೇಶದಲ್ಲಿ ಹಕ್ಕಿ ಜ್ವರದ ಭೀತಿ ಎದುರಾಗಿದ್ದು, ಈಗಾಗಲೇ ಕೆಲ ರಾಜ್ಯಗಳಲ್ಲಿ ಅಲರ್ಟ್ ಘೋಷಿಸಲಾಗಿದೆ. ಇನ್ನು ಇಂತಹ ಸಂದರ್ಭದಲ್ಲಿ ಸಮಾಜವಾದಿ ಪಕ್ಷದ ನಾಯಕ ಐಪಿ ಸಿಂಗ್​ ಯಡವಟ್ಟು ಟ್ವೀಟ್​ ಮಾಡಿದ್ದಾರೆ.
ಹೌದು, ಅವರು ತಮ್ಮ ಟ್ವೀಟ್ ನಲ್ಲಿ ಈ ರೀತಿ ಬರೆದಿದ್ದು , ‘ಪ್ರಧಾನಿ ಮೋದಿ ಹಕ್ಕಿಗಳಿಗೆ ಕಾಳು ನೀಡಿದ ಬಳಿಕವೇ ದೇಶದಲ್ಲಿ ಹಕ್ಕಿ ಜ್ವರ ಶುರುವಾಗಿದೆ’ ಅಂತಾ ಐಪಿ ಸಿಂಗ್​ ಯಡವಟ್ಟು ಟ್ವೀಟ್​ ಮಾಡಿದ್ದಾರೆ.
ಇನ್ನು ಈ ಟ್ವಿಟರ್​ನಲ್ಲಿ ನವಿಲಿಗೆ ಪ್ರಧಾನಿ ಮೋದಿ ಕಾಳು ನೀಡುತ್ತಿರುವ ಫೋಟೋ ಪೋಸ್ಟ್ ಮಾಡಿದ ಐಪಿ ಸಿಂಗ್, ಈ ಮನುಷ್ಯನಿಗೆ ಏನು ಮಾಡೋದು..? ಇವರು ಆ ಬಡಪಾಯಿ ಹಕ್ಕಿಗಳಿಗೆ ಕಾಳು ಹಾಕಿದರು , ಈಗ ಅವು ಹಕ್ಕಿ ಜ್ವರದಿಂದ ಬಳಲುವಂತಾಗಿದೆ ಅಂತಾ ಶೀರ್ಷಿಕೆ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss