Saturday, July 2, 2022

Latest Posts

ಹಕ್ಕಿ ಜ್ವರಕ್ಕೆ ಹೆದರಿದ ಫ್ರಾನ್ಸ್: ಲಕ್ಷಾಂತರ ಕೋಳಿಗಳ ಮಾರಣ ಹೋಮಕ್ಕೆ ಮುಂದಾದ ಸರ್ಕಾರ!!

ಹೊಸದಿಗಂತ ಆನ್ ಲೈನ್ ಡೆಸ್ಕ್:

ವಿಶ್ವಕ್ಕೆ ಆವರಿಸಿರುವ ಕೊರೋನಾ ಪಿಡುಗಿನ ನಡುವೆ ಇದೀಗ ಹಕ್ಕಿ ಜ್ವರದ ಆತಂಕ ಹೆಚ್ಚಾಗಿದೆ. ಫ್ರಾನ್ಸ್ ನಲ್ಲಿ ಹಕ್ಕಿ ಜ್ವರದ ಭೀತಿಯಿಂದ ಸುಮಾರು 6 ಲಕ್ಷ ಕೋಳಿಗಳನ್ನು ಕೊಲ್ಲಲು ಅಲ್ಲಿನ ಸರ್ಕಾರ ಆದೇಶಿಸಿದೆ.

ಫ್ರಾನ್ಸ್ ದೇಶದಲ್ಲಿನ ಫಾರ್ಮ್ ಹೌಸ್ ಗಳಲ್ಲಿನ ಕೋಳಿಗಳಿಗೆ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ಹರಡುವುದನ್ನು ನಿಯಂತ್ರಿಸಲು ಫ್ರಾನ್ಸ್ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ರಾಯಿಟರ್ಸ್ ವರದಿ ತಿಳಿಸಿದೆ. ಈಗಾಗಲೇ ಫ್ರಾನ್ಸ್ ನಲ್ಲಿ 2 ಲಕ್ಷ ಕೋಳಿಗಳನ್ನು ಕೊಲ್ಲಲಾಗಿದ್ದು, ಇನ್ನೂ ನಾಲ್ಕು ಲಕ್ಷ ಕೋಳಿಗಳನ್ನು ಕೊಲ್ಲಲು ಸರ್ಕಾರ ನಿರ್ಧರಿಸಿದೆ.

ಭಾರತದ ನಾಲ್ಕು ರಾಜ್ಯಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಕೇರಳ, ರಾಜಸ್ಥಾನಗಳಲ್ಲಿ ಈಗಾಗಲೇ ಸಾವಿರಾರು ಹಕ್ಕಿಗಳು ಮೃತಪಟ್ಟಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss