ಹಣಕಾಸು ಸ್ಥಿತಿ ಕಷ್ಟದಲ್ಲಿದೆ ಸರಕಾರೀ ನೌಕರರು ತಿಂಗಳ ವೇತನ ನಿಧಿಗೆ ನೀಡಿ : ಕೇರಳ ಸಿಎಂ ಮನವಿ

0
100

ತಿರುವನಂತಪುರ: ಕೊರೊನಾ ವೈರಸ್ ಪ್ರತಿರೋಧಕ್ಕಾಗಿ ಸರಕಾರೀ ಉದ್ಯೋಗಿಗಳು ತಮ್ಮ ಒಂದು ತಿಂಗಳ ವೇತನವನ್ನು ದುರಂತ ನಿವಾರಣ ನಿಧಿಗೆ ನೀಡಬೇಕೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ರಾಜ್ಯದ ಹಣಕಾಸು ಸ್ಥಿತಿಯು ಕಷ್ಟದಲ್ಲಿ ಮುಂದುವರಿಯುತ್ತಿದೆ. ಇಂತಹ ಸಂದಿಗ್ಧಾವಸ್ಥೆಯಲ್ಲಿ ಸರಕಾರೀ ಉದ್ಯೋಗಸ್ಥರು ತಮ್ಮ 1 ತಿಂಗಳ ವೇತನವನ್ನು ನೀಡಬೇಕೆಂದು ಮುಖ್ಯಮಂತ್ರಿ ಸಲಹೆಯನ್ನು ನೀಡಿದ್ದಾರೆ.
ಸರ್ವೀಸ ಸಂಘಟನೆಯ ನೇತಾರರೊಂದಿಗೆ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಈ ವಿಚಾರವನ್ನು ಮಂಡಿಸಿದ್ದಾರೆ. ಉಚಿತ ರೇಶನ್ ವಿತರಣೆ ಹಾಗೂ ಇನ್ನಿತರ ಪ್ರಾಥಮಿಕ ಸೌಕರ್ಯಗಳಿಗಾಗಿ ಕೋಟಿ ಕೋಟಿ ಮೊತ್ತವನ್ನು ರಾಜ್ಯ ಸರಕಾರವು ಭರಿಸಬೇಕಿದೆ. ಆದುದರಿಂದ ಸಹಕರಿಸಬೇಕೆಂದು ಮುಖ್ಯಮಂತ್ರಿ ಹೇಳಿದ್ದಾರೆ. ಮುಖ್ಯಮಂತ್ರಿಯವರ ಕೇಳಿಕೆಯನ್ನು ಸರ್ವೀಸ್ ಸಂಘಟನೆಯ ನೇತಾರರು ಬೆಂಬಲಿಸಿದ್ದಾರೆ. ಆದರೆ ಯಾವುದಕ್ಕೂ ನಿರ್ಬಂಧಿಸಬಾರದೆಂದು ವಿರೋಧಪಕ್ಷ ಸರ್ವೀಸ್ ಸಂಘಟನೆಯ ನೇತಾರರು ಹೇಳಿದ್ದಾರೆ.

LEAVE A REPLY

Please enter your comment!
Please enter your name here