spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, September 19, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಹಣ್ಣಿನ ವ್ಯಾಪಾರಿಗೂ ಕೊರೋನಾ: ೧೫ ದಿನಗಳಿಂದ ಸಂಪರ್ಕ ಬಂದವರು ಕಂಟ್ರೋಲ್ ರೂಂ ಸಂಪರ್ಕಿಸಿ

- Advertisement -Nitte

ಮೈಸೂರು : ಮೈಸೂರು ತಾಲ್ಲೂಕಿನ ರಮ್ಮನಹಳ್ಳಿ ಗ್ರಾಮದ ಹಣ್ಣಿನ ವ್ಯಾಪಾರಿಯೊಬ್ಬರಿಗೆ ಜೂನ್ 19 ರಂದು ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ಕಳೆದ ಹದಿನೈದು ದಿನಗಳಿಂದ ಈ ವ್ಯಕ್ತಿಯ ಸಂಪರ್ಕ ಹೊಂದಿದ್ದವರು ತುರ್ತಾಗಿ ಡಿ.ಸಿ ಕಂಟ್ರೋಲ್ ರೂಂ ಸಂಪರ್ಕಿಸಬೇಕಾಗಿ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ.
ಈ ವ್ಯಕ್ತಿಯು ಜೂನ್ 8, 10 ಹಾಗೂ 12 ರಂದು ರಮ್ಮನಹಳ್ಳಿ ಗ್ರಾಮದಲ್ಲಿರುವ ಸಂಜೀವಿನಿ ಕ್ಲಿನಿಕ್ ಹಾಗೂ ಜೂನ್‌.15 ರಂದು ತನಿಷಾ ಕ್ಲಿನಿಕ್ ಮತ್ತು ಜೂನ್ 13 ರಂದು ಮೈಸೂರು ನಗರದ ಸೀತಾರಂಗ (ವಾತ್ಸಲ್ಯ) ಆಸ್ಪತ್ರೆಯ ಜನರಲ್ ವಿಭಾಗಕ್ಕೆ ಭೇಟಿ ಹಾಗೂ ರಾಮಕೃಷ್ಣ ನಗರದ ಸಾಯಿ ಬಾಬ ದೇವಸ್ಥಾನ ಹತ್ತಿರ, ಕುವೆಂಪುನಗರ ಕಾಂಪ್ಲೆಕ್ಸ್ ಹಾಗೂ ಹೂಟಗಳ್ಳಿ ಸಿಗ್ನಲ್ ಸರ್ಕಲ್ ಎಡ ಹಾಗೂ ಬಲ ಭಾಗದ ರಸ್ತೆಯಲ್ಲಿ ಮಾವಿನಹಣ್ಣು ಮತ್ತು ಬಾಳೆಹಣ್ಣು ವ್ಯಾಪಾರ ಮಾಡಿರುವುದಾಗಿ ತಿಳಿಸಿರುತ್ತಾರೆ.
ಈ ಹಿನ್ನೆಲೆಯಲ್ಲಿ ಕಳೆದ ಹದಿನೈದು ದಿನಗಳಿಂದ ಈ ವ್ಯಕ್ತಿಯ ಸಂಪರ್ಕ ಹೊಂದಿರುವ ರೋಗಿಗಳು, ಗ್ರಾಹಕರು ಮತ್ತು ಸಾರ್ವಜನಿಕರು ತಮ್ಮ ಕುಟುಂಬದ ಆರೋಗ್ಯದ ಹಿತದೃಷ್ಟಿಯಿಂದ ತಮ್ಮ ಹೆಸರನ್ನು ತುರ್ತಾಗಿ ಡಿ.ಸಿ ಕಂಟ್ರೋಲ್ ರೂಂ 0821-2423800 ಅಥವಾ 1077 ಇಲ್ಲಿಗೆ ದೂರವಾಣಿ ಮೂಲಕ ನೊಂದಾಯಿಸಿಕೊಳ್ಳಲು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss