Monday, July 4, 2022

Latest Posts

ಹತ್ತನೆಯ ತರಗತಿ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿನಿಗೆ ಕೊರೋನಾ‌ ಪಾಸಿಟಿವ್ 

ತುಮಕೂರು:ಶಿರಾತಾಲೂಕಿನಲ್ಲಿ ಹತ್ತನೆಯ  ತರಗತಿ  ಬರೆಯಬೇಕಾದ  ವಿದ್ಯಾರ್ಥಿಗೆ ಕರೊನ  ಪಾಸಿಟೀವ್  ಇರುವುದು  ದೃಡಪಟ್ಟಿದೆ.
ಶಿರಾತಾಲೂಕಿನ ಎಂದೊರೆ ಗ್ರಾಮಪಂಚಾಯಿತಿ  ವ್ಯಾಪ್ತಿಯ ಕಾಮಗೊಂಡನಹಳ್ಳಿಯ ಈ ವಿದ್ಯಾರ್ಥಿ ತನ್ನ  ತಾಯಿಯ  ಜೊತೆ  ಅವರ ತವರು ಮನೆಯಾದ ರಾಯದುರ್ಗಕ್ಕೆ ಹೋಗಿದ್ದು  ಅಲ್ಲಿ  ಆಕೆಗೆ ಪಾಸಿಟೀವ್  ಬಂದು  ಅಲ್ಲಿ  ಚಿಕಿತ್ಸೆ ಪಡೆಯುತ್ತಿದ್ದಾರೆ  ಎಂದು  ಅಧಿಕಾರಿಗಳು  ತಿಳಿಸಿದ್ದಾರೆ.
ಶಿಕ್ಷಕರೂ ಆಗಿರುವ  ಅವರ ತಂದೆ ಜೂನ್  22ರಂದು  ರಾಯದುರ್ಗಕ್ಕೆ  ಹೋಗಿ  ತಮ್ಮ  ಮಗನನ್ನು  ಕರೆದುಕೊಂಡು  ಬಂದು ಈ ಬಗ್ಗೆ  ತಾಲೂಕಿನ ಶಿಕ್ಷಣ  ಇಲಾಖೆಗೆ  ಔಪಚಾರಿಕವಾಗಿ ಮಾಹಿತಿ  ನೀಡಿದ್ದಾರೆ. ಕೂಡಲೇ   ಅಧಿಕಾರಿಗಳು ವಿದ್ಯಾರ್ಥಿಯನ್ನು ವೈದ್ಯಕೀಯ  ಪರೀಕ್ಷೆಗೆ  ಒಳಪಡಿಸಿದಾಗ ಸೋಂಕಿನ ಲಕ್ಷಣಗಳು  ಕಂಡುಬಂದಿದ್ದು , ಮನೆಯಿಂದ ಹೊರಬರದಂತೆ ಸೂಚಿಸಿದ್ಧಾರೆ.   ಜೂನ್ 24 ರ ಮಧ್ಯ  ರಾತ್ರಿಯೇ ಗ್ರಾಮಕ್ಕೆ ಧಾವಿಸಿದಾಳೆ ತಾಲೂಕು  ವೈದ್ಯಾಧಿಕಾರಿಗಳು,ಪೊಲೀಸರು  ವಿದ್ಯಾರ್ಥಿ ಮತ್ತು  ಅವರ ತಂದೆ ಯನ್ನು  ತುಮಕೂರಿಗೆ  ಕರೆದುಕೊಂಡು  ಬಂದಿದ್ದಾರೆ. ಸುದೈವವಶಾತ್ ಸದರಿ  ವಿದ್ಯಾರ್ಥಿ ಬೇರೆ  ವಿದ್ಯಾರ್ಥಿಗಳ ಜೊತೆ ಸಂಪರ್ಕಕ್ಕೆ  ಬಂದಿಲ್ಲ.
ಗ್ರಾಮಕ್ಕೆ  ಧಾವಿಸಿದಾಳೆ ಶಿರಾ ತಾಲೂಕು ಪಂಚಾಯಿತಿ  ಮುಖ್ಯಾಧಿಕಾರಿ  ಕೆ.ಸಿ.ಮೋಹನ್ ಮತ್ತು ತಾಲೂಕು  ವೈದ್ಯಾಧಿಕಾರಿ ಅಬ್ಜಲ್ ರೆಹಾನ್ ಗ್ರಾಮವನ್ನೂ  ಸ್ಯಾನಿಟೈಸ್  ಮಾಡಿ  ಗ್ರಾಮವನ್ನು ಸೀಜ್  ಮಾಡಿದ್ದಾರೆ.  ತಾಲೂಕು  ಆಡಳಿತ  ಈಗ ಗ್ರಾಮದಲ್ಲಿದೆ.
ವಿದ್ಯಾರ್ಥಿಯನ್ನು  ಆಸ್ಪತ್ರೆಗೆ  ಕರೆದುಕೊಂಡು  ಹೋಗಿರುವುದನ್ನು ಸ್ಪಷ್ಟಪಡಿಸಿರುವ ಮಧುಗಿರಿ  ಡಿಡಿಪಿಐ ರೇವಣಸಿದ್ಧಪ್ಪ ಈ ಪರೀಕ್ಷೆಯ ಸದರಿ  ವಿದ್ಯಾರ್ಥಿಗೆ  ಪರೀಕ್ಷೆ ಬರೆಯಲು  ಅವಕಾಶ  ನೀಡುತ್ತಿಲ್ಲ ಎಂದು  ತಿಳಿಸಿದ್ಧು ವಿದ್ಯಾರ್ಥಿ ಗುಣಮುಖರಾಗಿ  ಪೂರಕ ಪರೀಕ್ಷೆಯಲ್ಲಿ  ಫ್ರೆಷರ್ ವಿದ್ಯಾರ್ಥಿಯಾಗಿಯೇ ಪರೀಕ್ಷೆ ಬರೆಯಲಿ ಎಂದು  ಹಾರೈಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss