Wednesday, August 10, 2022

Latest Posts

ಹತ್ತು ವರ್ಷಗಳ ಬಳಿಕ ಕೇಂದ್ರದಿಂದ ‘ಸಾಕ್ಷರತಾ’ ಅನುದಾನ ಪಡೆಯಲಿದೆ ಕೇರಳ ರಾಜ್ಯ!

ಹೊಸದಿಗಂತ ಆನ್ ಲೈನ್ ಡೆಸ್ಕ್:

ಹತ್ತು ವರ್ಷಗಳ ಬಳಿಕ ಮೊದಲ ಬಾರಿಗೆ ಕೇರಳ ಸರ್ಕಾರವು ಕೇಂದ್ರ ಸರ್ಕಾರದಿಂದ ಸಾಕ್ಷರತಾ ಆಂದೋಲನ ಅನುದಾನ ಪಡೆಯಲಿದೆ.
ದೇಶದಲ್ಲಿ ಮುಂದಿನ 2030 ರ ವೇಳೆಗೆ ಅನಕ್ಷರತೆಯನ್ನು ಹೋಗಲಾಡಿಸಲು ಪಣತೊಟ್ಟಿರುವ ಕೇಂದ್ರ ಸರಕಾರ ಇದರ ಅಂಗವಾಗಿ ತನ್ನ ಮಹತ್ವಾಕಾಂಕ್ಷೆಯ ‘ಪಡ್ನಾ – ಲಿಖ್ನಾ’ ಅಭಿಯಾನ ಆರಂಭಿಸಿದೆ. ಈ ಅಭಿಯಾನದಡಿ ಕೇರಳ ಸರ್ಕಾರವು ಕೇಂದ್ರದ ಅನುದಾನ ಪಡೆಯಲಿದೆ ಎಂದು ತಿಳಿದು ಬಂದಿದೆ.
ಕೇರಳ ರಾಜ್ಯವು 100% ಸಾಕ್ಷರತಾ ಪ್ರಮಾಣ ಸಾಧಿಸಿದ ರಾಜ್ಯವಾಗಿದ್ದು, ಹೀಗಾಗಿ ಅನುದಾನ ಪಡೆದುಕೊಳ್ಳುತ್ತಿರಲಿಲ್ಲ. ಇದೀಗ ಹತ್ತು ವರ್ಷಗಳ ಬಳಿಕ ಸಾಕ್ಷರತಾ ಯೋಜನೆಗಾಗಿ ಕೇಂದ್ರದಿಂದ ‘ಪಡ್ನಾ – ಲಿಖ್ನಾ’ ಅಭಿಯಾನ ನಿಧಿಯನ್ನು ಸ್ವೀಕರಿಸುತ್ತಿದೆ. ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಗಳೆಂದು ಗುರುತಿಸಲಾಗಿರುವ ವಯನಾಡ್‌, ಇಡುಕ್ಕಿ, ಪಾಲಕ್ಕಾಡ್‌ ಹಾಗೂ ಮಲಪ್ಪುರಂಗಳಲ್ಲಿ 1.15 ಲಕ್ಷ ಅನಕ್ಷರಸ್ಥರಿದ್ದು, ಅಲ್ಲಿ ಈ ಯೋಜನೆಯಡಿ ಮೊದಲ ಹಂತದಲ್ಲಿ ಅಭಿಯಾನ ಆರಂಭಿಸಲಾಗುತ್ತಿದೆ. ಈ ಬಗ್ಗೆ ಮಾಹಿತಿ ನೀಡಿದ ಕೆಎಸ್‌ಎಲ್‌ಎಂಎ ನಿರ್ದೇಶಕ ಪಿ.ಎಸ್‌.ಶ್ರೀಕಲಾ, ಕೇರಳವೂ ಕೇಂದ್ರ ಸರ್ಕಾರದ ಹೊಸ ‘ಫಡ್ನಾ ಲಿಖ್ನಾ’ ಅಭಿಯಾನದ ಭಾಗವಾಗಿದ್ದು, ಹೀಗಾಗಿ ಒಟ್ಟು 4.74 ಕೋಟಿ ಮೌಲ್ಯದ ಯೋಜನೆ ಪಡೆಯಲಿದೆ ಎಂದು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss