ಪಪ್ಪಾಳೆ ಕಾಯಿ ಬೊಂಡಾ ಬಹಳ ಬೇಗ ಮತ್ತು ರುಚಿಯಾಗಿ ತಯಾರಿಸುವಂತ ರೆಸಿಪಿ. ಇದನ್ನು ಊಟದ ಜೊತೆಗೂ ಸೇವಿಸಬಹುದು, ಚಹಾದ ಜೊತೆಗೂ ಸೇವಿಸಬಹುದ. ಎಲ್ಲರಿಗೂ ಇಷ್ಟವಾಗುವಂತಹ ರೆಸಿಪಿ ಇದು. ಇದನ್ನು ಹೀಗೆ ಮಾಡಿ..
ಬೇಕಾಗುವ ಪದಾರ್ಥ:
ಪಪ್ಪಾಳೆ ಕಾಯಿ
ಕಡಲೆ ಹಿಟ್ಟು
ಉಪ್ಪು
ಮೆಣಸಿನ ಪುಡಿ
ಜೀರಿಗೆ
ಓಮ್
ಸೋಡಾ
ಎಣ್ಣೆ
ಮಾಡುವ ವಿಧಾನ:
ಮೊದಲಿಗೆ ಅರ್ಧ ಪಪ್ಪಾಳೆಕಾಯಿಯನ್ನು ಚೆನ್ನಾಗಿ ತುರಿದುಕೊಳ್ಳಿ. ನಂತರ ಅದನ್ನು ಬೇಯಿಸಿಕೊಳ್ಳಿ. ಆನಂತರ ಅದಕ್ಕೆ ಕಡಲೆ ಹಿಟ್ಟು, ಉಪ್ಪು, ಮೆಣಸಿನ ಪುಡಿ, ಓಮ್, ಜೀರಿಗೆ, ಜಿಟಿಕೆ ಸೋಡಾವನ್ನು ಹಾಕಿ ಉಂಡೆ ಕಟ್ಟುವ ಹದಕ್ಕೆ ಮಾಡಿಕೊಳ್ಳಿ. ಚಿಕ್ಕ ಚಿಕ್ಕ ಉಂಡೆಗಳ್ನು ಮಾಡಿಕೊಂಡು ಎಣ್ಣೆಯಲ್ಲಿ ಕರಿಯಿರಿ. ಇದನ್ನು ಸಾಸ್ ಜೊತೆ ಸವಿಯಬಹುದು.